– ಭಾರತೀಯರಿಂದ ಟರ್ಕಿಗೆ ಬ್ಯಾನ್ ಬಿಸಿ
ಬೆಂಗಳೂರು: ಆಪರೇಷನ್ ಸಿಂಧೂರ (Operation Sindoor) ಸೇನಾ ಕಾರ್ಯಾಚರಣೆಯಲ್ಲಿ ಪಾಕ್‌ಗೆ ಟರ್ಕಿ (Turkey) ಡ್ರೋನ್‌ಗಳನ್ನು ನೀಡಿತ್ತು. ಈ ಹಿನ್ನೆಲೆ ಟರ್ಕಿ ವಿರೋಧಿ ಅಲೆ ಭಾರತದಲ್ಲಿ ಹೆಚ್ಚಾಗಿದೆ. ಟರ್ಕಿ ಮಾರ್ಬಲ್ (Marble) ಬ್ಯಾನ್ ಆಗಿದ್ದು, ಬೆಂಗಳೂರಿಗೆ (Bengaluru) ಬರುತ್ತಿಲ್ಲ.
ಭಾರತ ಹಾಗೂ ಪಾಕ್ ನಡುವೆ ನಡೆದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ, ಶತ್ರು ದೇಶಕ್ಕೆ ಸಹಾಯ ಮಾಡಿದ ಟರ್ಕಿ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತದಿಂದ ಸಹಾಯ ಪಡೆದ ಟರ್ಕಿಗೆ ಭಾರತ ಮಾಡಿದ ಸಹಾಯ ಸಹ ಮರೆತು ಪಾಕ್‌ನ್ನು ಬೆಂಬಲಿಸಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಟರ್ಕಿ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬರ್ತಿದೆ. ಇದನ್ನೂ ಓದಿ: S-500 ಏರ್ ಡಿಫೆನ್ಸ್ ಸಿಸ್ಟಂ ಬಂದ್ರೆ ವಿಶ್ವದಲ್ಲಿ ಭಾರತವೇ ಪವರ್‌ಫುಲ್
ಅದರಲ್ಲಿ ಟರ್ಕಿ ಸಪ್ಲೈ ಮಾಡುತ್ತಿದ್ದ ಪ್ರಮುಖ ಆಮದು ವಸ್ತುಗಳಲ್ಲಿ ಮಾರ್ಬಲ್ ಗಳು ಸಹ ಒಂದು.ಈಗಾಗಲೇ ಉದಯಪುರ ಮಾರ್ಬಲ್ ಪ್ರೊಸೆಸರ್ಸ್ ಅಸೋಸಿಯೇಷನ್ ಟರ್ಕಿಯಿಂದ ಅಮೃತಶಿಲೆಯ ಆಮದನ್ನು ಸ್ಥಗಿತಗೊಳಿಸಿದೆ. ಅದರಂತೆ ಬೆಂಗಳೂರಿಗೂ ಕಳೆದ ನಾಲ್ಕೈದು ದಿನಗಳಿಂದ ಟರ್ಕಿ ಮಾರ್ಬಲ್‌ಗಳು ಬರುತ್ತಿಲ್ಲ.
ಭಾರತವು ಪ್ರತಿ ವರ್ಷ 14-18 ಲಕ್ಷ ಟನ್ ಟರ್ಕಿ ಮಾರ್ಬಲ್ ಅನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ. 70 ರಷ್ಟು ಅಮೃತಶಿಲೆಯನ್ನು ಟರ್ಕಿ ದೇಶವೊಂದರಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಈ ವ್ಯಾಪಾರದ ಮೌಲ್ಯ ಸುಮಾರು 2,500 ರಿಂದ 3,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಬರೋಬ್ಬರಿ 600 ಡ್ರೋನ್‌ಗಳಿಂದ ಪಾಕ್ ದಾಳಿ – ಎಲ್ಲವನ್ನೂ ಹೊಡೆದುರುಳಿಸಿದ್ದ ಭಾರತ
ಸಾಮಾನ್ಯವಾಗಿ ಟರ್ಕಿ ಮಾರ್ಬಲ್‌ಗಳನ್ನು ಪ್ಲೋರಿಂಗ್‌ಗೆ ಬಳಸಲಾಗುತ್ತಿತ್ತು. ಆದರೆ, ಪಾಕ್‌ಗೆ ಟರ್ಕಿ ಸಹಾಯ ಮಾಡಿದ ಹಿನ್ನೆಲೆ ಟರ್ಕಿ ಮಾರ್ಬಲ್ ಬ್ಯಾನ್ ಮಾಡಲಾಗಿದೆ. ಈ ದೇಶದ ಮಾರ್ಬಲ್‌ಗಳ ಬದಲಾಗಿ ಇಟಲಿ, ವಿಯೆಟ್ನಾಂ, ಇರಾನ್ ಜೊತೆಗೆ ಭಾರತದ ಒಳಗೆ ಉತ್ಪಾದನೆಯಾಗುವ ಮಾರ್ಬಲ್, ಗ್ರಾನೈಟ್‌ಗಳನ್ನು ಜನ ಕೊಳ್ಳುತ್ತಿದ್ದಾರೆ. ಹೀಗಾಗಿ, ಟರ್ಕಿ ಮಾರ್ಬಲ್‌ಗಳಿಗೆ ಡಿಮ್ಯಾಂಡ್ ಕುಗ್ಗಿದೆ.