ಬೆಂಗಳೂರು: ಬಾಬುಸಾಬ್‌ಪಾಳ್ಯದಲ್ಲಿ (Babusapalya) ಭಾರೀ ಮಳೆಗೆ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಲಾಗಿದೆ.
ಭಾರೀ ಮಳೆಗೆ ಕಾರಣಕ್ಕೆ ಮಂಗಳವಾರ ಮಧ್ಯಾಹ್ನ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ (Bengaluru Building Collapse) ಬುಡಮೇಲಾಗಿ ಬಿದ್ದಿತು. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಹಲವಾರು ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು. ಅವರ ಪೈಕಿ 8 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಉಳಿದವರ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಈ ನಡುವೆ ಕಟ್ಟಡ ಮಾಲೀಕರಾದ ಮುನಿರೆಡ್ಡಿ, ಪುತ್ರ ಭುವನ್ ಹಾಗೂ ಗುತ್ತಿಗೆದಾರ ಮುನಿಯಪ್ಪ ಎನ್ನುವವರನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ – ಡಿಕೆಶಿ ಖಡಕ್ ವಾರ್ನಿಂಗ್
ಬುಧವಾರವೂ ಕಾರ್ಯಚರಣೆ ನಡೆಸಲಾಗುತ್ತೆ. ಇನ್ನೂ 15 ಗಂಟೆ ಅವಶೇಷಗಳಡಿ ಸಿಲುಕಿಯೂ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ಆಜಾಜ್ ಪಾಶಾ ಸೇರಿ ಒಟ್ಟು 14 ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮೊಟೋ ಕೇಸ್ ದಾಖಲಿಸೋದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ಎಇಇ ವಿನಯ್ ಸಸ್ಪೆಂಡ್ ಆಗಿದ್ದಾರೆ. ಅಂದ ಹಾಗೇ, ಬಿಬಿಎಂಪಿ 3 ಬಾರಿ ನೊಟೀಸ್ ನೀಡಿ ಸುಮ್ಮನಾಗಿತ್ತು. ಈ ಮಧ್ಯೆ, ಕಟ್ಟಡ ನಿರ್ಮಿಸಿದ ಮಾಲಿಕ ಭುವನ್‌ರೆಡ್ಡಿ, ಗುತ್ತಿಗೆದಾರ ಮುನಿಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಡಾನಾ ಚಂಡಮಾರುತದ ಅಬ್ಬರ – ಆಂಧ್ರ, ತಮಿಳುನಾಡು ಸೇರಿ ನಾಲ್ಕು ರಾಜ್ಯಗಳಲ್ಲಿ ಕಟ್ಟೆಚ್ಚರ