ಬೆಂಗಳೂರು: 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಿಕ್ಷಾ ಚಾಲಕನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
54 ವರ್ಷದ ಲಕ್ಷ್ಮಣ್ ಎಂ ಗೆ ಸಿಟಿ ಕೋರ್ಟ್ ಗುರುವಾರ ಈ ಶಿಕ್ಷೆ ವಿಧಿಸಿದೆ. ಈತ ದಕ್ಷಿಣ ಬೆಂಗಳೂರಿನ ಇಟ್ಟಮಾಡು ನಿವಾಸಿಯಾಗಿದ್ದು, 2015ರಲ್ಲಿ ಈ ಪ್ರಕರಣ ನಡೆದಿತ್ತು. ಶಿಕ್ಷೆಯ ಜೊತೆಗೆ ಲಕ್ಷ್ಮಣ್ ಗೆ ಕೋರ್ಟ್ 50,000ರೂ ದಂಡ ವಿಧಿಸಿದೆ.
2015ರ ಡಿಸೆಂಬರ್ ತಿಂಗಳಿನಲ್ಲಿ ಬಾಲಕಿ ಆಂಟಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಲಕ್ಷ್ಮಣ್, ಬಾಲಕಿ ಬಳಿ ತಿಂಡಿ ಕೊಡಿಸುವುದಾಗಿ ಹೇಳಿ ಆಕೆಯನ್ನು ಬೆಡ್ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕೆ ಅಚ್ಚುಕಟ್ಟು ಠಾಣೆಯ ಪೊಲೀಸರು ಲಕ್ಷ್ಮಣ್ ನನ್ನು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶೆ ಎಂ ಲತಾ ಕುಮಾರು ಅವರು ಬಾಲಕಿಗೆ 3 ಲಕ್ಷ ಪರಿಹಾರ ಕೊಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv