– ಸಾಕ್ಷಿ ಸಿಗಬಾರದು ಅಂತ ಸಿಸಿಟಿವಿ ಡಿವಿಆರ್ ಕೂಡ ಅಬೇಸ್
ಬೆಂಗಳೂರು: ರಾಜ್ಯದಲ್ಲಿ ಕಾನೂನು, ಪೊಲೀಸರು ಅಂದ್ರೆ ಭಯವೇ ಇಲ್ಲದಂತಾಗಿದೆ. ಹಾಡಹಗಲೇ ಬ್ಯಾಂಕ್ ಲೂಟಿ, ಎಟಿಎಂ ವಾಹನ ರಾಬರಿಗಳು ನಡೀತಿವೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಅತಿದೊಡ್ಡ ರಾಬರಿ ನಡೆದಿದೆ. ಬೀದರ್‌ನಲ್ಲಿ ಎಟಿಎಂ ವಾಹನ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣದ ಟ್ರಂಕ್ ದೋಚಿದ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಹೃದಯಭಾಗದಲ್ಲೇ ಎಟಿಎಂ ವಾಹನ ಹೈಜಾಕ್ ಮಾಡಿ 7 ಕೋಟಿ 11 ದರೋಡೆ (Bengaluru ATM Vehicle Robbery) ಮಾಡಲಾಗಿದೆ.
ಎಫ್‌ಐಆರ್ ದಾಖಲು
ಬೆಂಗಳೂರಿನಲ್ಲಿ (Bengaluru) 7 ಕೋಟಿ ದರೋಡೆ ಪ್ರಕರಣ ಕುರಿತು ಸಿಎಂಎಸ್ ಏಜೆನ್ಸಿ ಮ್ಯಾನೇಜರ್ ದೂರಿನನ್ವಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದರೋಡೆಯಾದ 7.11 ಕೋಟಿ ಹಣ ಜೆ.ಪಿ ನಗರ, ಸಾರಕ್ಕಿ ಬ್ರ್ಯಾಂಚ್ ಹಾಗೂ ಐಟಿಐ ಲೇಔಟ್‌ನ ಮೂರು ಬ್ಯಾಂಕುಗಳಿಗೆ ಸೇರಿದ್ದಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ – ಡ್ರೈವರ್, ಸಿಬ್ಬಂದಿ ಮೇಲೆಯೇ ಡೌಟ್; ತನಿಖೆಗೆ 3 ವಿಶೇಷ ತಂಡ ರಚನೆ
ಸಿಸಿಟಿವಿ ಡಿವಿಆರ್ ಹೊತ್ತೊಯ್ದ ದರೋಡೆಕೋರರು
ಇನ್ನೂ 7.11 ಕೋಟಿ ಹಣ ಕೊಳ್ಳೆಹೊಡೆದ ದರೋಡೆಕೋರರು ಸಾಕ್ಷ್ಯಗಳು ಸಿಗಬಾರದು ಅನ್ನೋ ಕಾರಣಕ್ಕೆ ಸಿಸಿಟಿವಿ ಡಿವಿಆರ್ ಕೂಡ ಹೊತ್ತೊಯ್ದಿದ್ದಾರೆ. ಸದ್ಯ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಮೂರು ವಿಶೇಷ ತಂಡಗಳನ್ನ ರಚಿಸಲಾಗಿದ್ದು, ತೀವ್ರ ಶೋಧ ನಡೆಸಲಾಗುತ್ತಿದೆ.
ನಕಲಿ ನಂಬರ್ ಪ್ಲೇಟ್ ಸುಳಿವು ಪತ್ತೆ
ಇನ್ನೂ ದರೋಡೆಕೋರರು ಕಾರಿಗೆ ಬಳಸಿದ ನಕಲಿ ಬಂಬರ್ ಪ್ಲೇಟ್ ಪಿಬಿ ಗಂಗಾರ್ ಎಂಬುವವರಿಗೆ ಸೇರಿದ್ದು ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಬೆಂಬಲ ಬೆಲೆ ಸಿಗದಿದ್ದರೆ ಶಾಸಕರು, ಜಿಲ್ಲಾಧಿಕಾರಿಯ ಮನೆ ಮುಂದೆ ಮೆಕ್ಕೆಜೋಳ ಸುರಿಯಿರಿ: ದಿಂಗಾಲೇಶ್ವರ ಶ್ರೀ
ಬೆಂಗಳೂರನ್ನು ಬೆಚ್ಚಿಬೀಳಿಸಿದ ದರೋಡೆ
ಇಂದು ಮಧ್ಯಾಹ್ನ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ಗ್ಯಾಂಗ್ ಜಯನಗರದ ಅಶೋಕ ಪಿಲ್ಲರ್ ಬಳಿ ಎಟಿಎಂ ವಾಹನ ಅಡ್ಡಗಟ್ಟಿ ನಾವು ಆರ್‌ಬಿಐನವರು ಎಂದು ಹೇಳಿಕೊಂಡಿದ್ದಾರೆ. ನೀವು ನಿಯಮ ಉಲ್ಲಂಘಿಸಿದ್ದೀರಿ. ಠಾಣೆಗೆ ಬನ್ನಿ ಅಂತ ಹೇಳಿ ಹಣ ಇದ್ದ ಸಿಎಂಎಸ್ ವಾಹನ ಹೈಜಾಕ್ ಮಾಡಿದ್ದಾರೆ. ನಂತರ ಡೈರಿ ಸರ್ಕಲ್ ಫ್ಲೈಓವರ್‌ನಲ್ಲಿ ವಾಹನ ನಿಲ್ಲಿಸಿ ಹಣವನ್ನು ತಮ್ಮ ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.
ಎಟಿಎಂ ವಾಹನದಲ್ಲಿ ಇಬ್ಬರು ಗನ್‌ಮ್ಯಾನ್, ಡ್ರೈವರ್, ಓರ್ವ ಸಿಎಂಎಸ್ ಸಿಬ್ಬಂದಿ ಇದ್ದರು. ಅವರನ್ನು ವಶಕ್ಕೆ ಪಡೆದು ಸಿದ್ದಾಪುರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪ್ರತಿಕ್ರಿಯಿಸಿ, ಘಟನೆ ನಡೆದು 45 ನಿಮಿಷದ ಬಳಿಕ ನಮಗೆ ಮಾಹಿತಿ ಕೊಟ್ಟಿದ್ದಾರೆ. ಹೈವೇಗಳಲ್ಲಿ ನಾಕಾಬಂದಿ ಹಾಕಲಾಗಿದೆ. ನಂಬರ್ ಪ್ಲೇಟ್ ನಕಲಿ ಅನ್ನೋದು ಗೊತ್ತಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ದರೋಡೆ ಕೇಸ್ ಆರೋಪಿಗಳ ಸುಳಿವು ಸಿಕ್ಕಿದೆ, ಅರೆಸ್ಟ್ ಮಾಡ್ತೀವಿ: ಪರಮೇಶ್ವರ್
ಇನ್ನು ಪ್ರತ್ಯಕ್ಷದರ್ಶಿ ಘಟನೆ ಬಗ್ಗೆ ವಿವರಿಸಿದ್ರೆ, ಹೆಚ್‌ಡಿಎಫ್‌ಸಿ ಸಿನಿಯರ್ ಸೆಕ್ಯುರಿಟಿ ಮ್ಯಾನೇಜರ್, ದರೋಡೆಕೋರರು ಮೊಬೈಲ್ ಕಸಿದುಕೊಂಡಿದ್ದರಿಂದ ಮಾಹಿತಿ ಕೋಡೋಕೆ ಲೇಟಾಗಿದೆ. ನಮಗೂ ಅನುಮಾನ ಇದೆ ಎಂದಿದ್ದಾರೆ. ಗೃಹ ಸಚಿವ ಪರಮೇಶ್ವರ್, ಕೆಲ ಮಾಹಿತಿ ಸಿಕ್ಕಿದ್ದು, ಬೇಗ ಬಂಧಿಸ್ತೀವಿ ಎಂದಿದ್ದಾರೆ. ಇನ್ನೂ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹಾಡಹಗಲೇ ನಡೆದ ಈ ಘಟನೆಯಿಂದ ಜನರು ಭಯಭೀತರಾಗಿದ್ದಾರೆ ಅಂತ ಬಿಜೆಪಿ ದೂರಿದೆ.

