ಬೆಂಗಳೂರು: ಚಂದ್ರಯಾನ-2 ಉಪಗ್ರಹ ಚಂದ್ರನ ಮುತ್ತಿಕ್ಕುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಭಾರತ ಕಾತುರದಿಂದ ಕಾಯುತ್ತಿದೆ. ಆದರೆ ಸಿಲಿಕಾನ್ ಸಿಟಿಯ ಕಲಾವಿದರೊಬ್ಬರು ತಮ್ಮ ಕಲೆಯ ಮೂಲಕ ವಿಭಿನ್ನವಾಗಿ ಚಂದ್ರಯಾನ-2ಕ್ಕೆ ಶುಭಹಾರೈಸಿದ್ದಾರೆ.
ಬೆಂಗಳೂರಿನ ಶ್ರೀರಾಮ್‍ಪುರದ ನಿವಾಸಿ ಅಕ್ಕಸಾಲಿಗರಾದ ನಾಗರಾಜ್ ರೇವಣಕರ್ ಚಿನ್ನದಲ್ಲಿ ಮಿನಿ ಚಂದ್ರಯಾನ-2 ಆಕೃತಿ ತಯಾರಿಸಿದ್ದಾರೆ. ನಾಗರಾಜ್ ಅವರು ಕಲಾವಿದರಾಗಿದ್ದು, 2 ಗ್ರಾಂ 700 ಮಿಲಿಗ್ರಾಂ ಚಿನ್ನದಲ್ಲಿ ಬಾಹುಬಲಿ ರಾಕೆಟ್ ತಯಾರಿಸಿದ್ದು, ಈ ಆಕೃತಿ ಸ್ಟಾಂಡ್ ಸೇರಿ 4.5 ಸೆಂಟಿಮೀಟರ್ ಎತ್ತರವಿದೆ. ಜೊತೆಗೆ ತ್ರಿವರ್ಣ ಧ್ವಜ, ಇಂಡಿಯಾ ಹಾಗೂ ಇಸ್ರೋ ಹೆಸರನ್ನು ಕೂಡ ಇದರ ಮೇಲೆ ಬರೆಯಲಾಗಿದೆ.
Advertisement
Advertisement
ಈ ಚಿನ್ನದ ಚಂದ್ರಯಾನ ತಯಾರಿಸಲು ನಾಗರಾಜ್ ಅವರು ಬರೋಬ್ಬರಿ 30 ಗಂಟೆಗಳ ಕಾಲ ಶ್ರಮಪಟ್ಟಿದ್ದಾರೆ. ಈ ಗೋಲ್ಡ್ ರಾಕೆಟ್ ಅನ್ನು ಭಾರತೀಯ ವಿಜ್ಞಾನಿಗಳಿಗೆ ಅರ್ಪಿಸುವುದಾಗಿ ನಾಗರಾಜ್ ತಿಳಿಸಿದ್ದಾರೆ. ಈ ಮಿನಿ ಚಂದ್ರಯಾನ-2ರ ಚಿನ್ನದ ಆಕೃತಿ ಸದ್ಯ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ:ಇಸ್ರೋ ಐತಿಹಾಸಿಕ ಸಾಧನೆಗೆ ಕೆಲವೇ ಗಂಟೆ ಬಾಕಿ – ಚಂದ್ರನ ಅಂಗಳಕ್ಕೆ ಇಳಿಯಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್
Advertisement
Advertisement
ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು `ಚಂದ್ರಯಾನ-2’ನ ವಿಕ್ರಮ್ ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆ(ಶನಿವಾರ ನಸುಕಿನಲ್ಲಿ) ಲ್ಯಾಂಡ್ ಆಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದು, ಇಲ್ಲಿಯ ವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಯು ತೆರಳದ ದಕ್ಷಿಣ ಧ್ರುವದ ಮೇಲೆ ಐತಿಹಾಸಿಕ ಲ್ಯಾಂಡಿಂಗ್‍ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.
ಮೋದಿ ಅವರೊಂದಿಗೆ ಪ್ರೌಢಶಾಲೆಗಳ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಮೋದಿ ಹಾಗೂ ಮಕ್ಕಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಟಿವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ.
We have the same wishes for Vikram, Orbiter.
Want to stay in touch with Vikram and Pragyan as they make their way to the untouched lunar South Pole and uncover its many mysteries? Then keep an eye out for the next edition of #CY2Chronicles! pic.twitter.com/2iA8W2lxtR
— ISRO (@isro) September 6, 2019
ಈ ವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೇರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.