– ಪಶ್ಚಿಮ ಬಂಗಾಳ ಯುವತಿಯಿಂದ ದೂರು ದಾಖಲು
ಬೆಂಗಳೂರು: ಸಂಜಯನಗರ ಅಪಾರ್ಟ್ಮೆಂಟ್ವೊಂದರ ಮಾಲೀಕನ ಮಗ ಕಂಠಪೂರ್ತಿ ಕುಡಿದು ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ.
Advertisement
ಪ್ಲಾನೆಟ್ ವಿಸ್ತಾ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್ಮೆಂಟ್ ಮಾಲೀಕನ ಮಗ ಮಂಜುನಾಥ್ ಗೌಡ ವಿರುದ್ಧ ಸಂಜಯ್ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪಶ್ಚಿಮ ಬಂಗಾಳ ಮೂಲದ ಯುವತಿ ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಇಸ್ಕಾನ್ ಮಂದಿರಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು – ದೇವರ ಮೂರ್ತಿಗೆ ಹಾನಿ
Advertisement
Advertisement
ಯುವತಿ ಫ್ಲಾಟ್ನಲ್ಲಿ ಬಾಡಿಗೆಗೆ ಇದ್ದಳು. ಪಾರ್ಸೆಲ್ ತೆಗೆದುಕೊಳ್ಳಲು ಗೇಟ್ ಬಳಿ ಬಂದವಳನ್ನ ಫ್ಲ್ಯಾಟ್ಗೆ ಎಳೆದೊಯ್ಯಲು ಆರೋಪಿ ಯತ್ನಿಸಿದ್ದ. ಅವಾಶ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಫ್ಲಾಟ್ಗೆ ಎಳೆದೊಯ್ಯಲು ಯತ್ನಿಸಿದ್ದಾಗಿ ಯುವತಿ ದೂರು ನೀಡಿದ್ದಾರೆ.
Advertisement
ಡಿ.3ರ ರಾತ್ರಿ 10:30ಕ್ಕೆ ಪಾರ್ಸಲ್ ತೆಗೆದುಕೊಳ್ಳಲು ಗೇಟ್ ಬಳಿ ಯುವತಿ ಹೋಗಿದ್ದಳು. ಆಗ ಆರೋಪಿ ಮಂಜುನಾಥ್ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತ ಕುಡಿದಿದ್ದರಿಂದ ಏನೂ ಮಾತನಾಡದೇ ಯುವತಿ ಸುಮ್ಮನಾಗಿದ್ದಳು. ಮತ್ತೆ ಬೈಯುತ್ತಾ ಯುವತಿ ಕಪಾಳಕ್ಕೆ ಹೊಡೆದಿದ್ದಾನೆ. ಅಲ್ಲದೇ ಬಿಗಿಯಾಗಿ ಕುತ್ತಿಗೆ ಹಿಡಿದಿದ್ದ, ತಪ್ಪಿಸಿಕೊಳ್ಳಲು ಹೋದಾಗ ಬೆರಳು ಕಚ್ಚಿ ಗಾಯಗೊಳಿಸಿದ್ದಾನೆ. ಆಗ ಆತನ ಮನೆಯೊಳಗೆ ಯುವತಿಯನ್ನ ಎಳೆದುಕೊಂಡು ಹೋಗಲು ಯತ್ನಿಸಿದ. ತಪ್ಪಿಸಿಕೊಂಡು ಹೋಗುವಾದ ಮತ್ತೆ ಬಲವಾಗಿ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ದುಸ್ಥಿತಿ ತಲುಪಿದ 25 ವರ್ಷಗಳ ಹಳೇ ಸೇತುವೆ – ನಿತ್ಯ ಜೀವ ಭಯದಲ್ಲೇ ಸವಾರರ ಸಂಚಾರ
ಗಲಾಟೆಯಾದ ಬೆಳಗ್ಗೆ ಕಿಟಕಿಯಲ್ಲಿ ಇಣುಕಿ ಮಂಜುನಾಥ್ ನೋಡಿದ್ದನಂತೆ. ಆಗ ಮನೆ ಒಳಗೆ ಬರ್ತೀನಿ ಎಂದಿದ್ದಾನೆ. ಯುವತಿ ಒಳಗೆ ಬಿಡದಿದ್ದಕ್ಕೆ ಮತ್ತೆ ನಿಂದನೆ ಮಾಡಿದ್ದಾನೆ. ಈ ಹಿಂದೆಯೂ ತನ್ನ ಜೊತೆ ಗಲಾಟೆ ಮಾಡಿದ್ದಾಗಿ ಯುವತಿ ಆರೋಪಿಸಿದ್ದಾಳೆ.