ಆನೇಕಲ್: ಸರ್ಕಾರ ನೀಡುವ ವೃದ್ಧಾಪ್ಯ ವೇತನದಿಂದ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಇದೀಗ ವರ್ಷ ವರ್ಷ ಹಿಂದುಳಿದ ವರ್ಗದ ವೃದ್ಧರನ್ನು ಗುರುತಿಸಿ ಅವರಿಗೆ ಸಂಘದಿಂದ ವೃದ್ಧಾಪ್ಯ ವೇತನ ನೀಡುತ್ತಿದೆ.
ಇಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಆನೇಕಲ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಆನೇಕಲ್ ತಾಲೂಕಿನಾದ್ಯಂತ 250ಕ್ಕೂ ಹೆಚ್ಚು ವೃದ್ಧರಿಗೆ ವೃದ್ಧಾಪ್ಯ ವೇತನ ನೀಡಲಾಯಿತು. ಸಂಘದಲ್ಲಿ ಸದಸ್ಯರಾಗಿರುವವರ ಮಕ್ಕಳು ಉನ್ನತ ಶಿಕ್ಷಣ ಮಾಡುತ್ತಿದ್ದಾರೆ ಅಂತಹ ಮಕ್ಕಳಿಗೆ ಪ್ರತಿ ತಿಂಗಳು ಅವರ ವಿದ್ಯಾಭ್ಯಾಸದ ವೆಚ್ಚವೆಂದು 400 ರೂಪಾಯಿಂದ 1000 ರೂಪಾಯಿ ಶಿಷ್ಯ ವೇತನ ನೀಡುತ್ತಿದ್ದು, ಆನೇಕಲ್ ತಾಲೂಕಿನ ಸುಮಾರು 150 ಮಕ್ಕಳಿಗೆ ಈ ವರ್ಷ ಈ ಯೋಜನೆಯ ಅಡಿಯಲ್ಲಿ ಶಿಷ್ಯ ವೇತನ ನೀಡಲಾಯಿತು.
Advertisement
Advertisement
ಅತ್ತಿಬೆಲೆಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೃದ್ಧಾಪ್ಯ ವೇತನ ಹಾಗೂ ಶಿಷ್ಯ ವೇತನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅನೇಕಲ್ ವಲಯ ಸಂಘದ ಮಂಜುನಾಥ್ ಮಾತನಾಡಿ, ನಮ್ಮ ಸಂಘವು ಕೇವಲ ಸಾಲ ನೀಡಿ ಮರು ವಸೂಲಿ ಮಾಡುವುದು ಎಂಬ ತಿಳುವಳಿಕೆ ಇದೆ. ಆದರೆ ನಮ್ಮ ಸಂಘ ಹಿಂದುಳಿದ ಪ್ರದೇಶಗಳಲ್ಲಿನ ಜನರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದು, ಮೊದಲಿಗೆ ನಾವು ವೃದ್ಧಾಪ್ಯ ವೇತನಕ್ಕೆ ಗುರುತಿಸಿ ನಂತರ ಕೇಂದ್ರ ಕಛೇರಿಯಿಂದ ಒಪ್ಪಿಗೆ ಪಡೆದು ವಿತರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.