ಬೆಂಗಳೂರು: ಇಂದು ಅಮ್ಮಣ್ಣಿ ಕಾಲೇಜಿನಲ್ಲಿ ಸಂಕ್ರಾಂತಿ ಜಾನಪದ ಜಾತ್ರೆ ಆಯೋಜಿಸಲಾಗಿದ್ದು, ಹಳ್ಳಿ ಸೊಗಡು ಕಾಲೇಜಿನಲ್ಲಿ ಅಂದವನ್ನು ಹೆಚ್ಚಿಸಿತ್ತು.
ತೆಂಗಿನ ಗರಿಗಳಿಂದ ಹೆಣೆಯಲಾದ ಚಪ್ಪರದಲ್ಲಿ ಜನಪದ ಮೇಳಕ್ಕೆ ಸ್ವಾಗತ ಎಂದು ಬರೆದಿದ್ದು, ಬಣ್ಣ ಬಣ್ಣದ ಮಡಿಕೆಗಳು, ಕಬ್ಬು, ಸಂಕ್ರಾಂತಿ ಹಬ್ಬದ ಮೆರಗು ಹೆಚ್ಚಿಸಿದವು. ಕಾಲೇಜು ಆವರಣವೆಲ್ಲವೂ ಜಾನಪದ ಲೋಕದಂತೆ ಕಂಡು ಬಂದಿದ್ದು, ಕೋಲೆ ಬಸವ, ಅಲಂಕಾರಿಕ ಎತ್ತಿನ ಗಾಡಿ, ಒಣ ಹುಲ್ಲಿನಿಂದ ಜಾನಪದ ಸಂಭ್ರಮ ಹೆಚ್ಚಿಸುತ್ತಿದ್ದ ಸ್ಟೇಜ್ ವಿದ್ಯಾರ್ಥಿಗಳನ್ನ ಆಕರ್ಷಿಸಿತು. ಅಲ್ಲದೆ ಡೊಳ್ಳು ಕುಣಿತದ ಸದ್ದಿಗೆ ಹುಡುಗಿಯರು ಹುಚ್ಚೆದ್ದು ಕುಣಿದರು.
ಈ ಹಬ್ಬದ ಸಂಭ್ರಮದ ನಡುವೆ ಕಾಲೇಜಿನ ವಿದ್ಯಾರ್ಥಿನಿಯರು ಸೀರೆ, ಧಾವಣಿಯುಟ್ಟು ಸಂಪ್ರದಾಯಿಕ ಲುಕ್‍ನಲ್ಲಿ ಫುಲ್ ಮಿಂಚಿದರು. ಸಂಪ್ರದಾಯಿಕ ಲುಕ್‍ನಲ್ಲಿ ಕಾಲೇಜ್ ಕ್ಯಾಂಪಸ್ ನಲ್ಲಿ ಕ್ಯಾಟ್ ವಾಕ್ ಮಾಡಿ ಖುಷಿಪಟ್ಟರು. ಸ್ಥಳದಲ್ಲೇ ಹೋಳಿಗೆ, ರೊಟ್ಟಿ ಊಟ ಕೂಡ ತಯಾರಿಸಲಾಗಿತ್ತು. ಅದನ್ನ ವಿದ್ಯಾರ್ಥಿನಿಯರು ಬಾಯಿ ಚಪ್ಪರಿಸಿಕೊಂಡು ತಿಂದರು. ದಿನಾ ಅದೇ ಪಾಠ, ಅದೇ ಕ್ಲಾಸ್ ಅಂತಾ ಬೋರಾಗಿದ್ದ ವಿದ್ಯಾರ್ಥಿನಿಯರು ಸಂಭ್ರಮದಿಂದ ಜಾತ್ರೆಯಲ್ಲಿ ಭಾಗಿಯಾದರು.