ಬೆಂಗಳೂರು: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ನಟಿ ಶಕೀಲಾ ಪ್ರಿನ್ಸ್ ಮಹೇಶ್ ಬಾಬು ಮತ್ತು ಅಲ್ಲು ಅರ್ಜನ್ ಫಾನ್ಸ್ ನಡುವೆ ಬೆಂಕಿ ಹಚ್ಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ಟಾರ್ ವಾರ್ ಎಂಬುದು ಎಲ್ಲಾ ಚಿತ್ರರಂಗದಲ್ಲೂ ಕಾಮನ್. ಈ ವಿಚಾರಕ್ಕೆ ಈಗ ತೆಲುಗು ಚಿತ್ರರಂಗದಲ್ಲಿ ಅಲ್ಲು ಮತ್ತು ಮಹೇಶ್ ಅಭಿಮಾನಿಗಳು ಸಖತ್ ಸದ್ದು ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಅಲಾ ವೈಕುಂಠಪುರಮುಲೋ ಮತ್ತು ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವ್ವರು ಸಿನಿಮಾ ಒಂದೇ ಬಾರಿ ರಿಲೀಸ್ ಆಗಿ ಸ್ಟಾರ್ ವಾರ್ ಗೆ ಕಾರಣವಾಗಿದೆ.
ಬಿನ್ನಿ ಮತ್ತು ಪ್ರಿನ್ಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ಹೀರೋಗಳನ್ನು ಹೊಗಳಿ, ಅಲ್ಲು ಮತ್ತು ಮಹೇಶ್‍ರನ್ನು ಸಖತ್ ಅಗಿ ಟ್ರೋಲ್ ಮಾಡಿದ್ದರು. ಈ ವಿಚಾರ ಸಿನಿಮಾ ಸಂಪಾದನೆಯವರೆಗೂ ಹೋಗಿ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟರನ್ನು ಮುಜುಗರಕ್ಕೀಡಾಗುವಂತೆ ಮಾಡಿತ್ತು. ಈಗ ನಟಿ ಶಕೀಲಾ ಕೊಟ್ಟಿರುವ ಹೇಳಿಕೆಯೊಂದು ಮತ್ತೆ ಈ ಸ್ಟಾರ್ ವಾರ್ ಗೆ ಪುಷ್ಟಿಕೊಟ್ಟಂತೆ ಆಗಿದೆ.
ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ಶಕೀಲಾ, ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನನಗೆ ಮಹೇಶ್ ಬಾಬು ಸಹೋದರನಂತೆ, ಜೂನಿಯರ್ ಎನ್‍ಟಿಆರ್ ಸೂಪರ್ ಅಗಿ ಡ್ಯಾನ್ಸ್ ಮಾಡುತ್ತಾರೆ. ಆದರೆ ಅಲ್ಲು ಅರ್ಜುನ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಶಕೀಲಾ ಅವರ ಹೇಳಿಕೆಯಿಂದ ಟಾಲಿವುಡ್‍ನಲ್ಲಿ ಸ್ವಲ್ಪ ಕಮ್ಮಿ ಆಗಿದ್ದ ಸ್ಟಾರ್ ವಾರ್ ಮತ್ತೆ ಶುರುವಾಗಿದ್ದು, ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟ ಮಾಡುತ್ತಿದ್ದಾರೆ.
ಶಕೀಲಾ ಅವರ ಈ ಹೇಳಿಕೆಯಿಂದ ಕಾದ ಕೆಂಡದಂತಾಗಿರುವ ಅರ್ಜುನ್ ಫಾನ್ಸ್, ಅಲ್ಲು ಅರ್ಜನ್ ಅವರಿಗೆ ನಮ್ಮ ದೇಶದಲ್ಲಿ ಅಲ್ಲದೇ ಹೊರದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಆದರೆ ಇಲ್ಲಿಯವರೇ ಆದ ಶಕೀಲಾ ಅವರಿಗೆ ಅಲ್ಲು ಗೊತ್ತಿಲ್ವಾ? ಅವರು ಬೇಕಂತಲೇ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ಶಕೀಲಾ ಅವರ ಸಹೋದರ ಮಹೇಶ್ ಬಾಬು ಎಂದು ಟ್ರೋಲ್ ಕೂಡ ಮಾಡುತ್ತಿದ್ದಾರೆ.