– ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು
– ಹಳೆ ದ್ವೇಷ, ಆಸ್ತಿ ವ್ಯಾಜ್ಯದ ಕಲಹಕ್ಕೆ ಕೊಲೆ
– ಇಬ್ಬರು ಆರೋಪಿಗಳು ಅರೆಸ್ಟ್
ಬೆಂಗಳೂರು: ಮಂಗಳವಾರ ಕೊಲೆಯಾಗಿದ್ದ ಅಲಯನ್ಸ್ ವಿವಿಯ ಮಾಜಿ ವಿಸಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ ಆರೋಪಿಗಳನ್ನು ಬಂಧಿಸುವಲ್ಲಿ ಆರ್ ಟಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರ್.ಟಿ ನಗರದ ಮೈದಾನಕ್ಕೆ ವಾಯುವಿಹಾರಕ್ಕೆ ತೆರಳಿದ್ದ ಅಯ್ಯಪ್ಪ ಅವರನ್ನು ದುಷ್ಕರ್ಮಿಗಳ ತಂಡ ಕೊಲೆ ಮಾಡಿ ಪರಾರಿಯಾಗಿತ್ತು. ಈ ವಿಚಾರದಲ್ಲಿ ಅಲಯನ್ಸ್ ವಿವಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಸುಧೀರ್ ಅಂಗೂರ್ ಮತ್ತು ಅಲಯನ್ಸ್ ಯುನಿವರ್ಸಿಟಿಯ ನೌಕರ ಸೂರಜ್ ಸಿಂಗ್ ನನ್ನು ಬಂಧಿಸಲಾಗಿದೆ.
Advertisement
Advertisement
ಅಲಯನ್ಸ್ ವಿವಿ ಎರಡು ಬಣಗಳಾಗಿ ಕಚ್ಚಾಟ ನಡೆಯುತ್ತಿತ್ತು ಮತ್ತು ಈ ಕೊಲೆ ಹಿಂದೆ ಹಳೆ ದ್ವೇಷ, ಆಸ್ತಿ ವ್ಯಾಜ್ಯದ ವಿವಾದಗಳು ಕೇಳಿ ಬಂದಿದ್ದವು. ಈ ಕಾರಣಕ್ಕಾಗಿ ನಾನು ಸೂರಜ್ ಸಿಂಗ್‍ಗೆ ಅಯ್ಯಪ್ಪ ಅವರನ್ನು ಕೊಲೆ ಮಾಡಲು ಒಂದು ಕೋಟಿ ರೂ. ಗೆ ಸುಪಾರಿ ನೀಡಿದ್ದೆ ಎಂದು ಪೊಲೀಸರ ಮುಂದೆ ಅದ್ದರಿಂದ ಸುಧೀರ್ ಅಂಗೂರ್ ತಪ್ಪೊಪ್ಪಿಕೊಂಡಿದ್ದಾನೆ.
Advertisement
ಕೊಲೆಗೆ ಕಾರಣ ಏನು?
ಅಲಯನ್ಸ್ ವಿವಿ ಎರಡು ಬಣಗಳಾಗಿ ಕಿತ್ತಾಟ ನಡೆಯುತಿತ್ತು. ಈ ವಿಚಾರದಲ್ಲಿ ಸ್ಥಾಪಕ ಮಧುಕರ್ ಅಂಗೂರ್ ನನ್ನ ವಿವಿಯಿಂದ ಆತನ ಸಹೋದರಿ ಶೈಲಜಾ ಛಬ್ಬಿ ಹೊರಗೆ ಹಾಕಿದ್ದರು. ಇತ್ತೀಚೆಗೆ ಕಾಲೇಜಿನ ಆಡಳಿತವನ್ನು ಶೈಲಜಾ ಛಬ್ಬಿ ಹಾಗೂ ಮತ್ತೊಬ್ಬ ಸಹೋದರ ಸುಧೀರ್ ಅಂಗೂರ್ ನೋಡಿಕೊಳ್ಳುತ್ತಿದ್ದರು. ಅಯ್ಯಪ್ಪ ದೊರೆ ಈ ವಿಚಾರದಲ್ಲಿ ಶೈಲಜಾ ಛಬ್ಬಿ ಜೊತೆ ಮನಸ್ತಾಪ ಹೊಂದಿದರು ಎನ್ನಲಾಗಿದೆ. ಹೀಗಾಗಿ ಕಾಲೇಜಿನ ಅವ್ಯವಹಾರದ ಕೆಲವೊಂದು ದಾಖಲೆಗಳನ್ನು ಮಧುಕರ್ ಅಂಗುರ್‍ಗೆ ಅಯ್ಯಪ್ಪ ದೊರೆ ನೀಡಿದ್ದರು. ಹೀಗಾಗಿ ಅಯ್ಯಪ್ಪ ದೊರೆಯನ್ನು ಕೊಲೆ ಮಾಡಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.
Advertisement
ಮಂಗಳವಾರ ಕೊಲೆಯಾದ ಅಯ್ಯಪ್ಪ ದೊರೆಯ ಪತ್ನಿ ಭಾವನ ಸುಧೀರ್ ಅಂಗೂರ್ ಜೊತೆ ನನ್ನ ಗಂಡನಿಗೆ ಮನಸ್ತಾಪ ಇತ್ತು ಎಂದು ಹೇಳಿದ್ದರು. ಈ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಸುಧೀರ್ ಅಂಗೂರ್ ನನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದಾರೆ. ಆದರೆ ಹೇ ನಾನ್ಯಾಕೆ ಕೊಲೆ ಮಾಡಲಿ. ನನಗೂ ಇದಕ್ಕೂ ಏನ್ ಸಂಬಂಧ.? ನನಗೆ ಏನೂ ಗೊತ್ತೇ ಇಲ್ಲ ಎಂದು ನಾಟಕವಾಡಿದ್ದ ಸುಧೀರ್ ಅಂಗೂರ್, ನಮ್ಮಲ್ಲೇ ಅಯ್ಯಪ್ಪ ವಿಸಿ ಆಗಿದರು, ನಾನ್ಯಾಕೆ ಅವರನ್ನು ಕೊಲೆ ಮಾಡಿಸಲಿ. ಇತ್ತೀಚೆಗೆ ನಮಗೂ ಅವರಿಗೂ ಸಂಬಂಧ ಇರಲಿಲ್ಲ ಎಂದು ಹೇಳಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದನು.
ಈ ರೀತಿ ಹೇಳಿದ್ದರೂ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ತೀವ್ರಗೊಳಿಸಿದಾಗ ನಾನೇ ಅಯ್ಯಪ್ಪ ದೊರೆಯನ್ನು ಕೊಲೆ ಮಾಡಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಅವರನ್ನು ಕೊಲೆ ಮಾಡಲು ನಮ್ಮ ಯುನಿವರ್ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಸಿಂಗ್ ಒಂದು ಕೋಟಿ ರೂ ಗೆ ಸುಪಾರಿ ನೀಡಿದ್ದೆ. ಅದರಂತೆ ಆರ್.ಟಿ ನಗರದ ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದ ಅಯ್ಯಪ್ಪ ನನ್ನು ಕೊಲೆ ಮಾಡಿದ್ದೆವು ಎಂದು ಒಪ್ಪಿಕೊಂಡಿದ್ದಾನೆ.
ಇನ್ನೊಂದು ಕೊಲೆಗೂ ಸ್ಕೆಚ್
ಅಯ್ಯಪ್ಪ ದೊರೆಯನ್ನು ಕೊಲೆ ಮಾಡಿದ ಆರೋಪಿಗಳು ಅ ದಿನವೇ ಅಯ್ಯಪ್ಪ ದೊರೆ ಸಹಾಯ ಮಾಡುತ್ತಿದ್ದ ವಿವಿ ಸ್ಥಾಪಕ ಮಧುಕರ್ ಅಂಗೂರ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅಯ್ಯಪ್ಪ ಅವರ ಕೊಲೆಯ ಹಿನ್ನೆಲೆಯಲ್ಲಿ ಪೊಲೀಸರು ಮಧುಕರ್ ಅವರ ಮನೆಗೆ ಭದ್ರತೆ ನೀಡಿದ್ದರಿಂದ ಸ್ಕೆಚ್ ಮಿಸ್ ಆಗಿತ್ತು.
https://www.youtube.com/watch?v=QbTObw08blQ