ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (KIAB/BLR ವಿಮಾನ ನಿಲ್ದಾಣ) FY 2023-24 ಸಾಲಿನ ಸತತ ನಾಲ್ಕನೇ ವರ್ಷವೂ ಪೆರಿಷಬಲ್ ಸರಕುಗಳ ರಫ್ತಿನಲ್ಲಿ ಭಾರತದಲ್ಲೇ ನಂಬರ್ 1 ಸ್ಥಾನ ಮುಂದುವರೆಸಿಕೊಂಡು ಬಂದಿದೆ.
ಈ ಆರ್ಥಿಕ ವರ್ಷದಲ್ಲಿ, BLR ವಿಮಾನ ನಿಲ್ದಾಣವು 63,188 ಮೆಟ್ರಿಕ್ ಟನ್‌ಗಳ (MT) ಪೆರಿಷಬಲ್ ಸರಕು ಸಾಗಣೆ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಏರಿಕೆ ಕಂಡಿದೆ. ಈ ಮೂಲಕ BLR ವಿಮಾನ ನಿಲ್ದಾಣವು ಪೆರಿಷಬಲ್ ಸರಕುಗಳ ಸಾಗಣೆಯಲ್ಲಿ ಭಾರತದಲ್ಲಿ ತನ್ನ ಸಾಧನೆಯನ್ನು ಎತ್ತಿ ತೋರಿಸುತ್ತದೆ. ದೇಶದ ಒಟ್ಟು ಪೆರಿಷಬಲ್ ಸರಕುಗಳ ಶೇ.28ರಷ್ಟು ಹಾಗೂ ದಕ್ಷಿಣ ಭಾರತದ ಪೆರಿಷಬಲ್ ಸರಕುಗಳ ಒಟ್ಟು ಶೇ.44 ಅನ್ನು BLR ವಿಮಾನ ನಿಲ್ದಾಣದ ಮೂಲಕವೇ ನಿರ್ವಹಿಸಲಾಗಿದೆ. FY 2023-24 ಸಾಲಿನಲ್ಲಿ ಪೆರಿಷಬಲ್ ಸರಕು ಸಾಗಣೆಯಲ್ಲಿ ಶೇ.28ರಷ್ಟು ರಾಷ್ಟ್ರೀಯ ಪಾಲನ್ನು ಹೊಂದಿದೆ. ಇದನ್ನೂ ಓದಿ: ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದ್ರೆ 500ರೂ. ದಂಡ- ಬಿಬಿಎಂಪಿ ಆಯುಕ್ತ ಎಚ್ಚರಿಕೆ
Advertisement
Advertisement
BLR ವಿಮಾನ ನಿಲ್ದಾಣವು ವರ್ಷವಿಡೀ ವಿವಿಧ ಪೆರಿಷಬಲ್ ಸರಕುಗಳನ್ನು ರಫ್ತು ಮಾಡುವಲ್ಲಿ ಉತ್ಕೃಷ್ಟವಾಗಿದೆ. FY 2023-24 ಸಾಲಿನಲ್ಲಿ ಕೋಳಿ ಉತ್ಪನ್ನ ರಫ್ತಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, 47,041 ಮೆಟ್ರಿಕ್ ಟನ್‌ಗಳನ್ನು ಸಾಗಿಸಿದೆ. ಇದಲ್ಲದೆ, 2,050 ಮೆಟ್ರಿಕ್ ಟನ್ ಹೂವುಗಳನ್ನು ರಫ್ತು ಮಾಡಿದೆ. ಒಟ್ಟಾರೆಯಾಗಿ ಕೋಳಿ, ತಾಜಾ ತರಕಾರಿಗಳು, ತಾಜಾ ಹಣ್ಣುಗಳು ಮತ್ತು ಹೂವುಗಳು ಸೇರಿದಂತೆ ಪ್ರಮುಖ ಪೆರಿಷಬಲ್ ಸರಕುಗಳು ಒಳಗೊಂಡಿದೆ.
Advertisement
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ (Bengaluru Airport) ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, FY 2023-24 ರಲ್ಲಿ ಪೆರಿಷಬಲ್ ಸರಕುಗಳ ರಫ್ತಿನಲ್ಲಿ BLR ವಿಮಾನ ನಿಲ್ದಾಣದ ಬೆಳವಣಿಗೆ ಹಾಗೂ ನಾಯಕತ್ವದ ಬಗ್ಗೆ ಅಪಾರ ಹೆಮ್ಮೆ ಎನಿಸುತ್ತದೆ. ಈ ಮೈಲಿಗಲ್ಲು ಸಾಧಿಸಲು ನಮ್ಮ ಬಳಿ ಇರುವ ಕೋಲ್ಡ್‌ಚೇನ್ ಶ್ರೇಷ್ಠತೆ ಹಾಗೂ ನಮ್ಮ ಪಾಲುದಾರರು ಮತ್ತು ಗ್ರಾಹಕರು ನಮ್ಮ ಮೇಲಿರಿಸಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು. ಇದನ್ನೂ ಓದಿ: ವಿಶ್ವನಾಥ್, ಪುತ್ರ ನನ್ನ ಮನೆಗೆ ಸೈಟ್ ಕೇಳೋಕೆ ಬಂದಿದ್ದ ಫೋಟೋ ಇದೆ: ಬೈರತಿ ಸುರೇಶ್ ಬಾಂಬ್!
Advertisement
ದಕ್ಷಿಣ ಭಾರತದಲ್ಲಿಯೇ ಶೇ.44 ರಷ್ಟನ್ನು ಒಟ್ಟು ಪೆರಿಷಬಲ್ ಸರಕು ರಫ್ತು ಪಾಲನ್ನು ನಾವು ಹೊಂದಿದ್ದೇವೆ. BLR ವಿಮಾನ ನಿಲ್ದಾಣವನ್ನು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಪ್ರಧಾನ ಗೇಟ್‌ವೇ ಆಗಿ ಪರಿವರ್ತಿಸಿದ್ದೇವೆ. ಪೆರಿಷಬಲ್ ಸರಕುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಬೆಂಬಲಿಸಲು ಮತ್ತು ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ರಫ್ತುದಾರರಾಗಿ ನಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ಮೂಲಸೌಕರ್ಯ ಮತ್ತು ಸೇವೆಗಳನ್ನು ಹೆಚ್ಚಿಸುವುದರ ಮೇಲೆ ಗಮನ ಹರಿಸಿದ್ದೇವೆ ಎಂದು ತಿಳಿಸಿದರು.
ಸಂಪರ್ಕ ಸಾಧನೆಯಲ್ಲಿ BLR ವಿಮಾನ ನಿಲ್ದಾಣವು ಗೇಟ್‌ವೇಯಾಗಿದ್ದು, ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಭಾರತೀಯ ಉತ್ಪಾದಕರನ್ನು ಸಂಪರ್ಕಿಸುತ್ತದೆ. ವಿಮಾನ ನಿಲ್ದಾಣದ ವಿಸ್ತಾರವಾದ ಜಾಲವಾದ ಓಮನ್, ಸಿಂಗಾಪುರ, ಕತಾರ್, ಯುಎಇ, ಮಾಲ್ಡೀವ್ಸ್, ಯುಕೆ ಮತ್ತು ಕುವೈತ್‌ನಂತಹ ಉನ್ನತ ಮಾರುಕಟ್ಟೆಗಳನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಜಾಗತಿಕ ಸ್ಥಳಗಳಿಗೆ ಪೆರಿಷಬಲ್ ಸರಕುಗಳ ತಡೆರಹಿತ ಸಾಗಣೆಯನ್ನು ಸುಗಮಗೊಳಿಸುತ್ತದೆ. ಈ ಸಂಪರ್ಕವು ದಕ್ಷಿಣ ಭಾರತದ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ತಾಜಾ ಉತ್ಪನ್ನವು ಅಂತಾರಾಷ್ಟ್ರೀಯ ಖರೀದಿದಾರರನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುತ್ತದೆ. ಇದನ್ನೂ ಓದಿ: MUDA Scam| ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ, ಬರೀ ಬೊಗಳೆ ಬಿಡ್ತಾನೆ: ಹೆಚ್‌ವಿಶ್ವನಾಥ್
BLR ವಿಮಾನ ನಿಲ್ದಾಣವು WFS BLR ಕೂಲ್‌ಪೋರ್ಟ್ ಅನ್ನು ಸಹ ಹೊಂದಿದ್ದು, ಇದು 40,000 ಮೆಟ್ರಿಕ್ ಟನ್‌ಗಳ ಟರ್ಮಿನಲ್ ಸಾಮರ್ಥ್ಯದೊಂದಿಗೆ ಭಾರತದ ಮೊದಲ ಏಕೀಕೃತ ಆನ್-ಏರ್‌ಪೋರ್ಟ್ ಪೆರಿಷಬಲ್ ಸರಕುಗಳ ನಿರ್ವಹಣಾ ಕೇಂದ್ರವಾಗಿದೆ. ಈ ಅತ್ಯಾಧುನಿಕ ಸೌಲಭ್ಯವು ಪೆರಿಷಬಲ್ ಕೋಲ್ಡ್ ಸ್ಟೋರೇಜ್ ಸರಕುಗಳಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಸಸ್ಯ ಮತ್ತು ಪ್ರಾಣಿಗಳ ಕ್ವಾರಂಟೈನ್ ತಪಾಸಣೆ, ಡ್ರಗ್ ಕಂಟ್ರೋಲರ್ ಲ್ಯಾಬ್ ಮತ್ತು ಭಾರತೀಯ ಕಸ್ಟಮ್ಸ್ ಸೇರಿದಂತೆ ಆನ್-ಸೈಟ್ ನಿಯಂತ್ರಕ ಸೇವೆಗಳನ್ನು ಒಳಗೊಂಡಿದೆ. ತನ್ನ ಮೂಲಸೌಕರ್ಯ ಮತ್ತು ಸೇವೆಗಳನ್ನು ನಿರಂತರವಾಗಿ ಸುಧಾರಿಸುವ ಮೂಲಕ, BLR ವಿಮಾನ ನಿಲ್ದಾಣವು ಪೆರಿಷಬಲ್ ಸರಕುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಬೆಂಬಲಿಸುವ ಜೊತೆಗೆ, ಭಾರತದಲ್ಲಿ ಕೃಷಿ ಮತ್ತು ತೋಟಗಾರಿಕಾ ರಫ್ತಿಗೆ ಸಹಕಾರ ನೀಡುತ್ತದೆ. ಈ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿ, ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.