ಬೆಂಗಳೂರು: ಮಂಗಳವಾರ ತಡರಾತ್ರಿಯಿಂದ ಇಂದು ಮಧ್ಯಾಹ್ನದವರೆಗೂ ವಿದೇಶದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 285 ಪ್ರಯಾಣಿಕರಲ್ಲಿ 6 ಮಂದಿಗೆ ಶಂಕಿತ ಕೊರೊನಾ ಸೋಂಕಿತ ಲಕ್ಷಣಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೆ ರವಾನಿಸಲಾಗಿದೆ.
ಏರ್ ಪೋರ್ಟಿಗೆ ವಿದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್ ಗಳ ಮೂಲಕ ನೇರವಾಗಿ ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಗುತ್ತದೆ. ಹೀಗಾಗಿ ತಡರಾತ್ರಿ ಏರ್ ಫ್ರಾನ್ಸ್ ವಿಮಾನದಲ್ಲಿ ಬಂದ 119 ಮಂದಿಯಲ್ಲಿ ಮೂವರಿಗೆ ಶಂಕಿತ ಕೊರೊನಾ ಸೋಂಕಿತ ಲಕ್ಷಣಗಳು ಕಂಡುಬಂದಿದ್ದವು.
Advertisement
Advertisement
ಹೀಗಾಗಿ ತಡರಾತ್ರಿ ಏರ್ ಫ್ರಾನ್ಸ್ ವಿಮಾನದಲ್ಲಿ ಬಂದ 119 ಮಂದಿಯಲ್ಲಿ ಮೂವರಿಗೆ ಶಂಕಿತ ಕೋರೋನಾ ಸೋಂಕಿತ ಲಕ್ಷಣಗಳು ಕಂಡುಬಂದಿದ್ದವು. ತದನಂತರ ಬಂದ ಜರ್ಮನಿಯಿಂದ ಹಾಗೂ ದುಬೈ ವಿಮಾನದಲ್ಲಿ ಮತ್ತೆ ಮೂವರಿಗೆ ಶಂಕಿತ ಕೋರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಇಂದು ಒಟ್ಟು 6 ಮಂದಿಯನ್ನ ಶಂಕಿತ ಪ್ರಕರಣಗಳ ಎ ಕ್ಯಾಟೆಗೆರಿ ಅಂತ ಪರಿಗಣಿಸಿ ರಾಜೀವ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದೆ.
Advertisement
ಒಟ್ಟಾರೆ 285 ಮಂದಿಯಲ್ಲಿ 6 ಮಂದಿ ಎ ಕ್ಯಾಟಿಗೆರಿಯವರಾಗಿದ್ದು ಅಂದ್ರೆ ಶಂಕಿತ ಪ್ರಕರಣಗಾಳಾಗಿದ್ದು, 05 ಮಂದಿ ಯನ್ನ ಬಿ ಕ್ಯಾಟಗೆರಿಯಲ್ಲಿ ವಿಂಗಡನೆ ಮಾಡಿ ಅವರನ್ನ ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ 274 ಮಂದಿ ಪ್ರಯಾಣಿರನ್ನ ಬಿಡಗುಗಡೆ ಮಾಡಿ ಮನೆಗಳಿಗೆ ಕಳುಹಿಸಲಾಗಿದ್ದು, ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ.
Advertisement
ಈ ಸಂಬಂಧ ಆಕಾಶ್ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ರವೀಂದ್ರ, ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ, ಆದರೆ ಏರ್ ಪೋರ್ಟ್ ಇರುವ ಕಾರಣ ವಿದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಯಾವುದೇ ರೀತಿಯ ಆತಂಕಪಡಬೇಡಿ ಅಂತ ಮನವಿ ಮಾಡಿದರು. ಆಕಾಶ್ ಆಸ್ಪತ್ರೆಯ ತಪಾಸಣೆ ಕೇಂದ್ರದಲ್ಲಿ ಇದುವರೆಗೂ 406 ಮಂದಿಯನ್ನ ತಪಾಸಣೆಗೆ ಒಳಪಡಸಲಾಗಿದ್ದು, ತಪಾಸಣೆಗೆ ಒಳಪಡುವ ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ ಎಂದರು.