ಬೆಂಗಳೂರು: ಕಾಂಗ್ರೆಸ್‍ನ ರೆಬೆಲ್ ಶಾಸಕ ಆನಂದ್ ಸಿಂಗ್ ಅವರು ಗೋವಾಗೆ ತೆರಳಿದ್ದಾರೆ
ಆನಂದ್ ಸಿಂಗ್ ಅವರು ಕಾರಿನಲ್ಲಿ ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಮಾಡಿದವು. ಆದರೆ ಆನಂದ್ ಸಿಂಗ್ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಅಲ್ಲಿಂದ ವಿಮಾನ ನಿಲ್ದಾಣದ ಒಳಗೆ ನಡೆದರು.
ಶಾಸಕ ಆನಂದ್ ಸಿಂಗ್ ಅವರು ಕೆಐಎಎಲ್‍ನಿಂದ 6ಇ992 ಇಂಡಿಗೋ ವಿಮಾನದ ಮೂಲಕ ಗೋವಾಗೆ ಪ್ರಯಾಣ ಬೆಳೆಸಿದ್ದಾರೆ. ಅತೃಪ್ತ ಶಾಸಕರ ಜೊತೆಗೆ ಮುಂಬೈ ರೆಸಾರ್ಟಿಗೆ ಹೋಗದೆ ರಾಜ್ಯದಲ್ಲಿಯೇ ಉಳಿದಿದ್ದ ಅವರು ಇಂದು ದಿಢೀರ್ ಪ್ರಯಾಣ ಕೈಗೊಂಡಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.