– ದೆಹಲಿಯಿಂದ ಬೆಂಗ್ಳೂರಿಗೆ ಸಿಎಂ ವಾಪಸ್
ಬೆಂಗಳೂರು: ಸಂಪುಟ ಪುನರಚನೆಯೋ, ವಿಸ್ತರಣೆಯೋ ಎಂಬ ಕುರಿತು ಯೋಚನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಭೇಟಿಗೆ ದೆಹಲಿಗೆ ತರೆಳಿದ್ದ ಸಿಎಂ ಶುಕ್ರವಾರ ರಾತ್ರಿ ಬೆಂಗಳೂರಿಗೆ ವಾಪಸ್ ಆದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗಾದರೂ ಸಣ್ಣ ಪುಟ್ಟ ಸಮಸ್ಯಗೆಳಿದ್ದರೆ ಶನಿವಾರ ಸಂಜೆಯೊಳಗೆ ವೈಯುಕ್ತಿಕವಾಗಿ ಕರೆದು ಮಾತನಾಡಿ ಸಮಸ್ಯೆಗಳನ್ನ ಬಗೆ ಹರಿಸುತ್ತೇನೆ. ಮೂರ್ನಾಲ್ಕು ದಿನಗಳೊಳಗೆ ಸಂಪುಟ ವಿಸ್ತರಣೆ ಡೇಟ್ ಫಿಕ್ಸ್ ಮಾಡಿ ಪ್ರಮಾಣವಚನ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ನಾವು ಅಂದುಕೊಂಡಂತೆ ಬಹುತೇಕರಿಗೆ ಯಾರಿಗೂ ತೊಂದರೆ ಆಗುವುದಿಲ್ಲ. ಒಂದೋ ಎರಡೋ ಚೇಂಜಸ್ ಇದ್ರೆ ವೈಯುಕ್ತಿಕವಾಗಿ ಕರೆದು ಮಾತನಾಡುತ್ತೇವೆ ಎಂದರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಭೇಟಿ ನಂತರ ತಾವು ಸಂತೋಷವಾಗಿದ್ರೀ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಹೌದು… ದೆಹಲಿಗೆ ಹೋಗಿದ್ದ ಕೆಲಸ ಆಗಿದ್ದಕ್ಕೆ ಹಾಗೂ ನಾವು ಹೇಳಿದಂತೆ ಆಗಲಿ ಅಂತ ಎಲ್ಲದಕ್ಕೂ ಅಮಿತ್ ಶಾ, ಜೆಪಿ ನಡ್ಡಾ ಅವರು ಒಪ್ಪಿಕೊಂಡಿರೋದಕ್ಕೆ ನನಗೆ ಸಂತೋಷ ಆಗಿದೆ ಎಂದು ತಿಳಿಸಿದರು.
ಸಚಿವ ಸಂಪುಟ ಪುನರಚನೆಯೋ ಅಥವಾ ವಿಸ್ತರಣೆಯೋ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್‍ವೈ, ಯೋಚನೆ ಮಾಡ್ತೀನಿ ಅಂತ ಹೇಳಿದರು. ಸಿಎಂ ಯಡಿಯೂರಪ್ಪ ಅವರ ಜೊತೆ ಪುತ್ರ, ಸಂಸದ ವಿಜಯೇಂದ್ರ ಸಹ ದೆಹಲಿಯಿಂದ ಆಗಮಿಸಿದರು.
ಇದಕ್ಕೂ ಮುನ್ನ ಏರ್‌ಪೋರ್ಟ್ ಗೆ ಆಗಮಿಸಿದ ಗುಪ್ತಚರ ಇಲಾಖೆಯ ಎಡಿಜಿಪಿ ಕಮಲ್ ಪಂಥ್ ಸ್ವತಂ ಸಿಎಂ ಯಡಿಯೂರಪ್ಪ ಅವರ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.