ಬೆಂಗಳೂರು: ದೀಪಾವಳಿ (Deepavali) ಹಬ್ಬದ ಆಚರಣೆ ವೇಳೆ ಪಟಾಕಿ (Firecrackers) ಸಿಡಿಸುತ್ತಿರುವುದರಿಂದ ನಗರದಲ್ಲಿ (Bengaluru) ವಾಯುಮಾಲಿನ್ಯ ಪ್ರಮಾಣ ದಿಢೀರ್ ಹೆಚ್ಚಳವಾಗಿದೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ ಹಸಿರು ಪಟಾಕಿ ಕಡ್ಡಾಯ ಇದ್ದರೂ ಸಹ ಹಲವಡೆ ರಾಸಾಯನಿಕಯುಕ್ತ ಪಟಾಕಿ ಬಳಕೆಯಾಗುತ್ತಿದೆ. ಇದರಿಂದ ನಗರದ ಹಲವಾರು ಭಾಗಗಳಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟದಲ್ಲಿದೆ. ಈಗಾಗಲೇ ದೆಹಲಿಯಲ್ಲಿ ಮಾಲಿನ್ಯ ಏರಿಕೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಮಾಲಿನ್ಯದ ವಿಚಾರವಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ.
Advertisement
Advertisement
ಬೆಂಗಳೂರಿನ ನಾನಾ ಭಾಗದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಅಳೆಯಲು ಮಾಪನ ಆಳವಡಿಕೆ ಮಾಡಲಾಗಿದೆ. ಈ ವೇಳೆ ಹಲವಾರು ಭಾಗಗಳಲ್ಲಿ ನಗರದ ವಾತಾವರಣ ಡೇಂಜರ್ ಝೋನ್‍ನಲ್ಲಿ ಇರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೀಪಾವಳಿಗೆ ಭಾರತದ ಕಂಪನಿಗಳು ದೀರ್ಘ ರಜೆ ನೀಡಲ್ಲ ಯಾಕೆ – ಎಡೆಲ್ವೀಸ್ ಮ್ಯೂಚುವಲ್ ಫಂಡ್ ಸಿಇಒ ಪ್ರಶ್ನೆ
Advertisement
Advertisement
ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದ ವಾಯುಮಾಲಿನ್ಯ?
ಜಯನಗರ – 189 (AQI)
ಬಾಪೂಜಿ ನಗರ – 171
ಹೊಂಬಾಳೆಗೌಡ ನಗರ – 141
ಸಿಲ್ಕ್ ಬೋರ್ಡ್ – 129
ಕೆಎಸ್‍ಆರ್ ಸಿಟಿ ರೈಲ್ವೆ ಸ್ಟೇಷನ್ – 94
ಹೆಬ್ಬಾಳ – 96
ಜಿಗಣಿ – 117
ಕಸ್ತೂರಿ ನಗರ – 77
ಪೀಣ್ಯ – 80
ಮೈಲಸಂದ್ರ ಆರ್‍ವಿಸಿಇ- 120
ಸಾಣೆಗುರುವನಹಳ್ಳಿ – 69
ಶಿವಪುರ – 95
ಬಿಟಿಎಂ ಲೇಔಟ್ – 85
ಗಾಳಿ ಗುಣಮಟ್ಟ ಸೂಚ್ಯಾಂಕದಲ್ಲಿ (Air Quality Index) 0-50 ಇದ್ದರೆ ಉತ್ತಮ, 51-100 ಮಧ್ಯಮ ಹಾಗೂ 101-150 ಅನಾರೋಗ್ಯಕರ ವಾತಾವರಣ, 150-200 ಸಂಪೂರ್ಣ ಅನಾರೋಗ್ಯಕರ ಎಲ್ಲರಿಗೂ ಈ ವಾತಾವರಣ ಹಾನಿಕಾರಕ ಎಂದು ಪರಿಗಣಿಸಲಾಗುತ್ತದೆ. 201-300 ಅತ್ಯಂತ ಅನಾರೋಗ್ಯಕರ ಹಾಗೂ 300ಕ್ಕಿಂತ ಮೇಲ್ಪಟ್ಟರೆ ಕೆಟ್ಟ ವಾತಾವರಣ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಫೋಟೋ ಶೂಟ್ ವೇಳೆ ಕಿರಿಕ್ – ಯುವಕನ ಇರಿದು ಕೊಂದ ಕಿಡಿಗೇಡಿಗಳು