Bengaluru CityCrimeDistrictsKarnatakaLatestLeading NewsMain Post

ಆ್ಯಸಿಡ್ ದಾಳಿ ಪ್ರಕರಣ – ಮತ್ತೆ ಐಸಿಯುವಿನಲ್ಲಿ ಯುವತಿ

Advertisements

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿಯನ್ನು ಮತ್ತೆ ಐಸಿಯುವಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Young, Acid, Nagesh,

ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆ ಯುವತಿ ಮೇಲೆ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ನಡೆಸುವ ಮೂಲಕ ವಿಕೃತ ಮೆರೆದಿದ್ದ. ಇದರಿಂದ ಶೇ.40 ರಿಂದ ಶೇ.50 ರಷ್ಟು ಸುಟ್ಟುಹೋಗಿದ್ದ ಯುವತಿ ಸ್ಥಿತಿ ಗಂಭೀರವಾಗಿತ್ತು. ನಂತರ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಆರೋಗ್ಯದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಚೇತರಿಕೆ ಕಂಡಿತ್ತು. ಇದನ್ನೂ ಓದಿ: ಆ್ಯಸಿಡ್ ದಾಳಿ ಪ್ರಕರಣ – ಯುವತಿಯ ಆರೋಗ್ಯದಲ್ಲಿ ಚೇತರಿಕೆ

ಇದೀಗ ಸಂತ್ರಸ್ತ ಯುವತಿಗೆ ಪದೇ, ಪದೇ ವಾಮಿಟ್ ಆಗುತ್ತಿದೆ. ಅಲ್ಲದೇ ಡ್ರೆಸ್ಸಿಂಗ್ ವೇಳೆ ಗಾಯಗಳಲ್ಲಿ ಕೀವು ಕಾಣಿಸಿಕೊಂಡಿದ್ದು, ದೊಡ್ಡ, ದೊಡ್ಡ ಗಾಯಗಳು ಇನ್ನೂ ಕೂಡ ಆರಿಲ್ಲದ ಕಾರಣ ಯುವತಿಯನ್ನು ಮತ್ತೆ ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಯುವತಿ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಪ್ರತ್ಯಕ್ಷ!

Leave a Reply

Your email address will not be published.

Back to top button