ಬೆಂಗಳೂರು: ಜೋಡಿ ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಬೆಂಗಳೂರಿನ ತಲಘಟ್ಟಪುರದ ನಾಗೇಗೌಡನಪಾಳ್ಯ ಬಳಿ ನಡೆದಿದೆ.
ವಿನೋದ ಅಲಿಯಾಸ್ ಕೋತಿ ಎಂಬಾತನೇ ಜೋಡಿ ಕೊಲೆಯ ಆರೋಪಿ. ವಿನೋದ್ ನನ್ನು ಬಂಧಿಸಲು ಹೋದಾಗ ಪೇದೆ ಪ್ರದೀಪ್ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಅತ್ಮ ರಕ್ಷಣೆಗಾಗಿ ತಲಘಟ್ಟಪುರ ಠಾಣೆಯ ಎಸ್‍ಐ ನಾಗೇಶ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಆದರೂ ಆರೋಪಿ ಪುನಃ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ ಎಸ್‍ಐ ನಾಗೇಶ್ ಅವರು ವಿನೋದ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಬಲಗಾಲಿಗೆ ಗುಂಡು ತಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಜೆ ಪಿ ನಗರದಲ್ಲಿ ಕಳೆದ ವಾರ ನಡೆದ ರೌಡಿ ಮಂಜ ಹಾಗೂ ವರುಣ್ ಕೊಲೆಯಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.