ಬೆಂಗಳೂರು: ಬೆಂಜ್ ಗುದ್ದಿದ ರಭಸಕ್ಕೆ 4 ವಾಹನಗಳು ಜಖಂಗೊಂಡು ಓರ್ವ ಸಾವನ್ನಪ್ಪಿದ ಘಟನೆ ಬೆಂಗಳೂರಿನ ತಿಪ್ಪಸಂದ್ರ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಆಲ್ಟೋ ಕಾರಿನಲ್ಲಿದ್ದ ಹರಿ ಮಂಹತ್ ಮೃತರಾಗಿದ್ದಾರೆ. ವೇಗವಾಗಿ ಬಂದ ಬೆಂಜ್ ಮೊದಲಿಗೆ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಆ ಬಳಿಕ ಎರಡು ಬೈಕ್‍ಗಳಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಆಲ್ಟೊ ಕಾರು ನುಜ್ಜುಗುಜ್ಜಾಗಿದೆ. ಏರ್ ಬ್ಯಾಗ್ ಓಪನ್ ಹಿನ್ನೆಲೆ ಸಣ್ಣಪುಟ್ಟ ಗಾಯಗಳೊಂದಿಗೆ ಬೆಂಜ್ ಕಾರ್‌ನಲ್ಲಿದ್ದವರು ಪಾರಾಗಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

ಬೆಂಜ್ ಕಾರು ಗುದ್ದಿದ ರಭಸಕ್ಕೆ ಮುಂದೆ ಇದ್ದ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿವೆ. ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.


