ಬೆಂಗಳೂರು: ರಂಜಾನ್ ದಿನವೇ ಚಿಕನ್ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾದ ಘಟನೆ ನಗರದಲ್ಲಿ ನಡೆದಿದೆ.
ಪಾದರಾಯನಪುರದ ಸಿಬ್ಗತ್ (35) ಕೊಲೆಯಾದ ದುರ್ದೈವಿ. ಪಾದರಾಯನಪುರದ ನ್ಯಾಷನಲ್ ಚಿಕನ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಬುಡೇನ್, ಸಾಧಿಕ್, ಬೇಬಿ ಹಾಗೂ ಮುಬಾರಕ್ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ.
ರಂಜಾನ್ ಹಬ್ಬದ ನಿಮಿತ್ತ ಮಾಸದ ವ್ಯಾಪಾರ ಜೋರಾಗಿ ನಡೆದಿತ್ತು. ಹೀಗಾಗಿ ಸಿಬ್ಗತ್, ಬುಡೇನ್, ಸಾಧಿಕ್, ಬೇಬಿ ಹಾಗೂ ಮುಬಾರಕ್ ನ್ಯಾಷನಲ್ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡಿದ್ದಾರೆ. ಮದ್ಯದ ಮತ್ತಿನಲ್ಲಿದ್ದ ನಾಲ್ವರು ಹಣ ಹಂಚಿಕೊಳ್ಳುತ್ತಿದ್ದಾಗ ಮಾತಿಗೆ ಮಾತು ಬೆಳೆದು, ಜಗಳ ತಾರಕಕ್ಕೇರಿದೆ. ಈ ವೇಳೆ ಆಕಸ್ಮಿಕವಾಗಿ ಸಿಬ್ಗತ್ ಹೊಟ್ಟೆಗೆ ಚಾಕು ತಗುಲಿ, ಗಂಭೀರವಾಗಿ ಗಾಯಗೊಂಡಿದ್ದಾನೆ.
ಚಾಕು ಹರಿತವಾಗಿದ್ದರಿಂದ ಸಿಬ್ಗತ್ ಹೊಟ್ಟೆಯಿಂದ ಕರಳು ಹೊರಗೆ ಬಂದಿವೆ. ಇದನ್ನು ನೋಡಿ ಗಾಬರಿಗೊಂಡ ಉಳಿದ ನಾಲ್ವರು ತಕ್ಷಣವೇ ಸಿಬ್ಗತ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಿಬ್ಗತ್ ಸಾವನ್ನಪ್ಪಿದ್ದಾನೆ.
ಜೆಜೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.