ಬೆಂಗಳೂರು: ತಾಯಿಯ ಹುಟ್ಟು ಹಬ್ಬದ ಖುಷಿಯಲ್ಲಿ ಮಗು ಮನೆ ಅಂಗಳದಲ್ಲಿ ಆಡುತ್ತಿತ್ತು. ಪೋಷಕರು ಕೂಡ ಮನೆ ಅಂಗಳದಲ್ಲಿ ಆಟ ಆಡುತ್ತಿರಬೇಕೆಂದು ಸುಮ್ಮನಾಗಿದ್ದರು. ಆದ್ರೆ ನಾನು ನಿಮ್ಮ ಮಾವ ಅಂತಾ ಬಂದ ವ್ಯಕ್ತಿಯೊಬ್ಬ ಮಗುವನ್ನು ಕಿಡ್ನಾಪ್ ಮಾಡಿ ಎಸ್ಕೇಪ್ ಆಗಿದ್ದಾನೆ.
ಬೆಂಗಳೂರಿನ ಕೆಪಿ ಅಗ್ರಹಾರದ ಮಂಜುನಾಥ್ ನಗರದ ರಾಜೇಶ್ ಮತ್ತು ಮಾಲಾ ದಂಪತಿಯ ಐದು ವರ್ಷದ ಮಗ ಚಂದನ್ ಎಂಬಾತನನ್ನು ಅಪಹರಣ ಮಾಡಲಾಗಿದೆ. ಭಾನುವಾರ ಚಂದನ್ ತಾಯಿ ಮಾಲಾರ ಬರ್ತ್ ಡೇ ಇತ್ತು. ಈ ಖುಷಿಯಲ್ಲಿದ್ದ ಪೋಷಕರು ದೇವಸ್ಥಾನಕ್ಕೆ ಹೋಗಲು ಮೊದಲು ಮಗುವನ್ನು ರೆಡಿ ಮಾಡಿ ಆಟವಾಡೋಕೆ ಬಿಟ್ಟು, ನಂತ್ರ ತಾವು ರೆಡಿ ಆಗುತ್ತಿದ್ದರು. ಈ ವೇಳೆಯಲ್ಲಿಯೇ ಚಂದನ್ ಕಿಡ್ನಾಪ್ ಆಗಿದೆ. ಬೈಕಿನಲ್ಲಿ ಬಂದವನೊಬ್ಬ ಚಂದನ್ ಜೊತೆ ಎಸ್ಕೇಪ್ ಆಗಿದ್ದಾನೆ.
Advertisement
ಇದೇ ವೇಳೆ ಫೋನ್ ಮಾಡಿದ ಕಿಡ್ನಾಪರ್, ನಿಮಗೆ ನಿಮ್ಮ ಮಗು ಬೇಕಾದ್ರೆ 30 ಸಾವಿರ ಕೊಡಿ ಅಂತಾ ಹೇಳಿ ಫೋನ್ ಕಟ್ ಮಾಡಿದ್ದಾನೆ. ಆದ್ರೆ ಸೋಮವಾರ ಬೆಳಗಿನ ಜಾವ ಮತ್ತೆ ಫೋನ್ ಮಾಡಿ ಅದು 30 ಸಾವಿರ ಅಲ್ಲ, 30 ಲಕ್ಷ ಕೊಡಿ ಅಂತಾ ಬೇಡಿಕೆ ಇಟ್ಟಿದ್ದಾನೆ.
Advertisement
ಆಟೋ ಚಾಲಕರಾಗಿರುವ ಚಂದನ್ ತಂದೆ, ಮೂವತ್ತು ಲಕ್ಷ ನಾನೆಲ್ಲಿಂದ ತರಲಿ ಅಂತಾ ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರೋ ಕೆಪಿ ಅಗ್ರಹಾರ ಪೊಲೀಸರು, ಆರೋಪಿಯ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.