ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ 3 ಸ್ಥಳ ಅಂತಿಮ – ಯಾವುವು ಆ ಸ್ಥಳಗಳು?

Public TV
1 Min Read
AI ಚಿತ್ರ
AI ಚಿತ್ರ

ಬೆಂಗಳೂರು: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 3 ಸ್ಥಳಗಳನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. 3 ಸ್ಥಳ ಅಂತಿಮ ಮಾಡಿ ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿದೆ.

2025ರ ಮಾರ್ಚ್ 5 ರಂದು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರದಿಂದ ಅಧಿಕೃತ ‌ಮಾಹಿತಿ ಸಿಕ್ಕಿದೆ.

ಇದೇ ವೇಳೆ HAL ವಿಮಾನ ನಿಲ್ದಾಣವನ್ನ ಡೊಮೆಸ್ಟಿಕ್ ವಿಮಾನ ನಿಲ್ದಾಣವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಕೇಂದ್ರಕ್ಕೆ ಜನವರಿ 16 ರಂದು ಸರ್ಕಾರ ಮನವಿ ಸಲ್ಲಿಕೆ ಮಾಡಿತ್ತು. ವಿಧಾನ ಪರಿಷತ್‌‌ನಲ್ಲಿ ಜವರಾಯಿಗೌಡ ಪ್ರಶ್ನೆಗೆ ಲಿಖಿತ ಮೂಲಕ ಸಚಿವ ಎಂ.ಬಿ.ಪಾಟೀಲ್ ಉತ್ತರ ನೀಡಿದ್ದಾರೆ.

ರಾಜ್ಯ ಸರ್ಕಾರ ಅಂತಿಮ ಮಾಡಿರುವ ಜಾಗಗಳು ಯಾವುವು?
1.ಬೆಂಗಳೂರು ದಕ್ಷಿಣ ತಾಲೂಕಿನ ಚೂಡಹಳ್ಳಿ ಹತ್ತಿರ
2.ಬೆಂಗಳೂರು ದಕ್ಷಿಣ ತಾಲೂಕು ಸೋಮನಹಳ್ಳಿ ಹತ್ತಿರ‌‌
3.ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ನೆಲಮಂಗಲ ಹತ್ತಿರ

Share This Article