Bengaluru CityCrimeDistrictsKarnatakaLatestMain Post

ಮಹಿಳೆಗೆ ಮರ್ಮಾಂಗ ತೋರಿಸಿದ ಹೆಡ್ ಕಾನ್ಸ್ಟೇಬಲ್ ಅಮಾನತು

ಬೆಂಗಳೂರು: ಹೆಡ್ ಕಾನ್ಸ್ಟೇಬಲ್ ಒಬ್ಬರು ಮಹಿಳೆಗೆ ತನ್ನ ಮರ್ಮಾಂಗ ತೋರಿಸಿದ ಘಟನೆ ಯಲಹಂಕ ನ್ಯೂಟೌನ್‍ನ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.

ಅಮೃತ ಹಳ್ಳಿಯ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಯಲಹಂಕ ಹೊಸನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಯ ಮುಂದೆ ಬೈಕ್ ನಿಲ್ಲಿಸಿ ಟಾರ್ಚ್ ಹಾಕಿ ತನ್ನ ಮರ್ಮಾಂಗವನ್ನು ತೋರಿಸಿದ್ದಾರೆ.

ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 354(ಎ) ಹಾಗೂ 509ರ ಅಡಿಯಲ್ಲಿ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು ಹೆಡ್ ಕಾನ್ಸ್‍ಟೇಬಲ್ ಚಂದ್ರಶೇಖರ್ ಅಮಾನತುಗೊಳಿಸಿ ಆದೇಶ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ

ದೂರಿನಲ್ಲಿ ಏನಿದೆ?
ಭಾನುವಾರ ರಂದು ರಾತ್ರಿ ಸುಮಾರು 10:30 ರಿಂದ 11 ಗಂಟೆ ಸಮಯಕ್ಕೆ ಬೀದಿ ನಾಯಿಗಳಿಗೆ ಊಟ ಹಾಕಲು ಹೋಗಿದ್ದೆ. ಆ ಸಂದರ್ಭದಲ್ಲಿ ಚಂದ್ರಶೇಖರ್ ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಜಿಪ್ ಅನ್ನು ತೆಗೆದು ಅವರು ಅಂಗಾಗವನ್ನು ತೋರಿಸಿದ್ದಾನೆ. ನಾನು ಜೋರಾಗಿ ಚೀರಿದ ಕೂಡಲೇ ಜನರು ಬಂದರು. ನನ್ನ ಹತ್ತಿರ ಮೊಬೈಲ್ ಫೋನ್ ಇಲ್ಲದ ಕಾರಣ ಸಾರ್ವಜನಿಕರು ವೀಡಿಯೋ ಮಾಡಿದ್ದಾರೆ. ಬಳಿಕ ವ್ಯಕ್ತಿಯು ನಾನು ಸಿಓಪಿ, ನೀವುಗಳು ಏನು ಮಾಡಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಅವನು ಮಾಡಿದ ಎಲ್ಲಾ ಕಾರ್ಯವು ವೀಡಿಯೋದಲ್ಲಿ ಸೆರೆಯಾಗಿದೆ. ವೀಡಿಯೋ ರೆಕಾರ್ಡ್ ಮಾಡಲು ಹೇಳಿದ ಕೂಡಲೇ ಕುಡಿದ ಮತ್ತಿನಲ್ಲಿದ್ದ ಆತ ದ್ವಿಚಕ್ರ ವಾಹನದಲ್ಲಿ ಹೋಗಿದ್ದಾನೆ. ಇದನ್ನೂ ಓದಿ: ಹೆತ್ತವರ ವಿರುದ್ಧ ದೂರು ನೀಡಿ ತಾನೇ ಜೈಲು ಪಾಲಾದ ಮಗ!

 

 

Leave a Reply

Your email address will not be published.

Back to top button