ಕಿರುತೆರೆಯಲ್ಲಿ ಬೆಂಗಾಲಿ ಸೀರಿಯಲ್ಗಳ ಮೂಲಕ ರಂಜಿಸಿದ್ದ ನಟಿ ಸುಚಂದ್ರಾ ದಾಸ್ಗುಪ್ತ (Suchandra Dasgupta) ಅವರು ಮೃತಪಟ್ಟಿದ್ದಾರೆ. ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಾಲಿ ನಟಿ ನಿಧನರಾಗಿದ್ದಾರೆ. ಈ ದುರ್ಘಟನೆಯು ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಬಾರಾನಗರದಲ್ಲಿ ನಡೆದಿದೆ. ಈ ಬಗ್ಗೆ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಕನ್ನಡದ ‘ಸ್ನೇಹದ ಕಡಲಲ್ಲಿ’ ಸಂಗೀತ ನಿರ್ದೇಶಕ ರಾಜ್ ನಿಧನ
Advertisement
ಸುಚಂದ್ರಾ ದಾಸ್ಗುಪ್ತ ಹಲವಾರು ಜನಪ್ರಿಯ ಬಂಗಾಳಿ ದೂರದರ್ಶನ ಕಾರ್ಯಕ್ರಮಗಳನ್ನು ನಿರೂಪಿಸುವುದರ ಜೊತೆಗೆ ಹಲವಾರು ಧಾರಾವಾಹಿಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ಇದೀಗ 29ನೇ ವಯಸ್ಸಿಗೆ ಯುವನಟಿ ಸುಚಂದ್ರಾ ಇಹಲೋಕ ತ್ಯಜಿಸಿದ್ದಾರೆ.
Advertisement
ಶೂಟಿಂಗ್ ನಂತರ, ನಟಿಯು ಮೇ 20ರ ಶನಿವಾರ ರಾತ್ರಿ ಮನೆಗೆ ಮರಳಲು ಅಪ್ಲಿಕೇಶನ್ ಆಧಾರಿತ ಬೈಕ್ ರೈಡ್ ಬುಕ್ ಮಾಡಿ ಅಲ್ಲಿಂದ ಹೊರಟಿದ್ದಾರೆ. ಈ ನಡುವೆ ಸೈಕಲ್ ಸವಾರನೊಬ್ಬ ಇದ್ದಕ್ಕಿದ್ದಂತೆ ಬೈಕ್ ಮುಂದೆ ಬಂದಿದ್ದರಿಂದ ಚಾಲಕ ಬ್ರೇಕ್ ತುಳಿದಿದ್ದಾನೆ. ಸಡನ್ ಬ್ರೇಕ್ ತುಳಿದ ಪರಿಣಾಮ ನಟಿಯು ಬೈಕ್ನಿಂದ ಕೆಳಗೆ ಬಿದ್ದಿದ್ದು, ಈ ವೇಳೆ ಆಕೆಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮರಣ ಹೊಂದಿದ್ದಾಳೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.