CrimeLatestMain PostNational

ಸ್ಟೀಲ್ ಟಿಫಿನ್ ಬಾಕ್ಸ್ ಸ್ಫೋಟ – ಬಾಲಕ ಸಾವು

ಕೋಲ್ಕತ್ತಾ: ಸ್ಟೀಲ್ ಟಿಫಿನ್ ಬಾಕ್ಸ್ ಸ್ಫೋಟಗೊಂಡು 17 ವರ್ಷದ ಹುಡುಗ ಮೃತಪಟ್ಟಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ರಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಶೇಖ್ ಸಾಹಿಲ್ ಎಂದು ಗುರುತಿಸಲಾಗಿದೆ. ಚಿಂದಿ ಆಯುವ ತನ್ನ ಅಜ್ಜ ಸಂಗ್ರಹಿಸಿದ್ದ ಟಿಫಿನ್ ಬಾಕ್ಸ್ ತೆರೆಯಲು ಪ್ರಯತ್ನಿಸಿದಾಗ ಟಿಫನ್ ಬಾಕ್ಸ್ ಸ್ಫೋಟಗೊಂಡು ಶೇಖ್ ಸಾಹಿಲ್ ಗಂಭೀರವಾಗಿ ಗಾಯಗೊಂಡಿದ್ದನು. ಇದನ್ನೂ ಓದಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ರಾಜೀನಾಮೆ

CRIME 2

ಈ ವೇಳೆ ಕೂಡಲೇ ಅವನನ್ನು ಕೋಲ್ಕತ್ತಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ಬ್ಯಾರಕ್ ಪೋರ್‌ನಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶೇಖ್ ಸಾಹಿಲ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಯನ್ನು ರಾಜ್ಯದಿಂದ ರಾಜ್ಯ ಸಭೆಗೆ ಸ್ಪರ್ಧಿಸಲು ಒಪ್ಪಿಸಿ – ರಾಹುಲ್‍ಗೆ ಮನವಿ

ಸಾಹಿಲ್, ಅಜ್ಜ ಅಬ್ದುಲ್ ಹಮೀದ್ ಅವರು ಚಿಂದಿ ಆಯುವಾಗ ಪತ್ತೆಯಾದ ಸ್ಟೀಲ್ ಟಿಫನ್ ಬಾಕ್ಸ್‌ವೊಂದನ್ನು ಮನೆಗೆ ಎತ್ತಿಕೊಂಡು ಬಂದಿದ್ದರು. ಅಲ್ಲದೇ ಬಾಕ್ಸ್ ಒಳಗೆ ಏನಿದೆ ಎಂದು ಪರಿಶೀಲಿಸುವಂತೆ ಮೊಮ್ಮಗ ಸಾಹಿಲ್‍ಗೆ ಹೇಳಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published.

Back to top button