ಕೋಲ್ಕತ್ತಾ: ರಾಜ್ಯದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಘಟನೆಗಳನ್ನು ಉಲ್ಲೇಖಿಸಿ, ಬಿಜೆಪಿ ನಾಯಕ ಸುವೆಂದು ಅಧಿಕಾರಿ ಅವರು ಪಶ್ಚಿಮ ಬಂಗಾಳವನ್ನು ರಕ್ತಕ್ಕೆ ಸಮೀಕರಿಸಿದ್ದಾರೆ.
ಈ ವರ್ಷದ ವ್ಯಾಪಾರ ಸಭೆಯ ಆರನೇ ಆವೃತ್ತಿಯಲ್ಲಿ ಬಂಗಾಳ ಎಂದರೆ ವ್ಯಾಪಾರ ಎಂದು ಜಗತ್ತಿಗೆ ತೋರಿಸಲು, ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು, ಪಾಲುದಾರಿಕೆ ಮತ್ತು ಸಹಯೋಗವನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ ಎಂದು ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯು ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಸಂತೋಷ್ ಪಾಟೀಲ್ ಕೇಸ್‌ಗೆ ಟ್ವಿಸ್ಟ್ – 2021ರಲ್ಲಿ ಬೆಳಗಾವಿ ZP ಅಧ್ಯಕ್ಷೆ ಬರೆದ ಪತ್ರ ಔಟ್
Advertisement
Advertisement
ಸದ್ಯ ಈ ವಿಚಾರವಾಗಿ ಮಾತನಾಡಿರುವ ಸುವೇಂದು ಅವರು, ಬಂಗಾಳದಲ್ಲಿ ಕೈಗಾರಿಕೆಗಳನ್ನು ಹೊಂದಲು ಸಾಧ್ಯವಿಲ್ಲ, ಭೂ ನೀತಿ ಕೆಟ್ಟದಾಗಿದೆ. ಇಲ್ಲಿ ಸಿಂಡಿಕೇಟ್ ರಾಜ್ ಇದೆ. ಅದು ಕಲ್ಲಿದ್ದಲು. ಬಂಗಾಳ ವ್ಯಾಪಾರಕ್ಕಾಗಿ ಅಲ್ಲ, ಆದರೆ ರಕ್ತ ಮತ್ತು ಬಿರ್ಭೂಮ್ ಬಾಂಬ್‍ಗಳಿಗಾಗಿದೆ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
Advertisement
Advertisement
ಇದೇ ತಿಂಗಳ ಆರಂಭದಲ್ಲಿ ಬಿರ್ಭೂಮ್‍ನ ಸಿಕಂದರ್‍ಪುರ ಗ್ರಾಮದ ಫುಟ್‍ಬಾಲ್ ಮೈದಾನದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಕಚ್ಚಾ ಬಾಂಬ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.ಬೊಗ್ಟುಯಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಸುಮಾರು ಎಂಟು ಮಂದಿ ಸುಟ್ಟು ಕರಕಲಾಗಿದ್ದರು. ಈ ಘಟನೆ ಸಂಬಂಧ ಕೇಂದ್ರೀಯ ತನಿಖಾ ದಳವು ತನಿಖೆ ನಡೆಸುತ್ತಿರುವ ಸಮಯದಲ್ಲಿ ಕಚ್ಚಾ ಬಾಂಬ್‍ಗಳನ್ನು ವಶಪಡಿಸಿಕೊಂಡಿದೆ.