ಕೋಲ್ಕತ್ತಾ: ತನ್ನ ಕಾರಿನ ಹೆಡ್‌ಲೈಟ್‌ಗಳನ್ನು ಮುಚ್ಚಲು ತ್ರಿವರ್ಣ ಧ್ವಜವನ್ನು ಬಳಸಿದ್ದಕ್ಕಾಗಿ ಪಶ್ಚಿಮ ಬಂಗಾಳ (West Bengal) ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ವ್ಯಕ್ತಿಯ ಬಳಿ ಧ್ವಜವನ್ನು (Tri Color Flag) ತೆಗೆಯುವಂತೆ ಕೇಳುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Advertisement
ಜನವರಿ 3 ರಂದು ಹೌರಾ ಜಿಲ್ಲೆಯ ಉಲುಬೇರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಕಾರಿನ ಹೆಡ್‌ಲೈಟ್‌ಗಳು ಡ್ಯಾಮೇಜ್ (Car’s Broken Headlights) ಆಗಿತ್ತು. ಈ ಹಿನ್ನೆಲೆಯಲ್ಲಿ ಆತ ರಾಷ್ಟ್ರಧ್ವಜದಿಂದ ಅವುಗಳನ್ನು ಮುಚ್ಚಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಕಾರನ್ನು ತಡೆದಿದ್ದಾರೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸ್ ತೋರಿಸುವಂತೆ ಕೇಳಿದ್ದಾರೆ.
Advertisement
ಬಳಿಕ ಹೆಡ್‌ಲೈಟ್‌ಗಳ ಮೇಲಿದ್ದ ರಾಷ್ಟ್ರಧ್ವಜವನ್ನು ತೆಗೆಯುವಂತೆ ಪೊಲೀಸರು ವ್ಯಕ್ತಿಗೆ ಗದರಿದ್ದಾರೆ. ಆದರೆ ಆತ ನಿರಾಕರಿಸಿದ್ದಾನೆ. ಈ ವೇಳೆ ಪೊಲೀಸರೇ ರಾಷ್ಟ್ರಧ್ವಜವನ್ನು ತೆಗೆದು ಮಡಚಿ ಸುರಕ್ಷಿತವಾಗಿ ಇರಿಸಿದರು. ತ್ರಿವರ್ಣ ಧ್ವಜವನ್ನು ಗೌರವಿಸದಿದ್ದಕ್ಕಾಗಿ ವ್ಯಕ್ತಿಗೆ ಪೊಲೀಸರು ಚೆನ್ನಾಗಿ ಥಳಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಪುತ್ರನ ಹತ್ಯೆಗೈದ ಬೆಂಗ್ಳೂರು ಸಿಇಓ ಪ್ರಕರಣ- ತಂದೆಯಿಂದ ಮಗುವಿನ ಅಂತ್ಯಸಂಸ್ಕಾರ
Advertisement
Advertisement
ಉಲುಬೇರಿಯಾ ಉಪವಿಭಾಗಾಧಿಕಾರಿ ಕಚೇರಿಯ ಹೊರಗೆ ಈ ಘರ್ಷಣೆ ನಡೆದಿದೆ. ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸುವುದು ಅಥವಾ ಅಗೌರವಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.