ಕೋಲ್ಕತ್ತಾ: ಡುರಾಂಡ್ ಕಪ್ ಫುಟ್‍ಬಾಲ್ 2022ರನ್ನು (Durand Cup Football Tournament) ಬೆಂಗಳೂರು ಎಫ್‍ಸಿ ತಂಡ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಫೈನಲ್‍ನಲ್ಲಿ ಹೋರಾಡಿ ಪ್ರಸ್ತಿಗೆದ್ದ ಬೆಂಗಳೂರು ಎಫ್‍ಸಿ (Bengaluru FC) ತಂಡದ ನಾಯಕ ಸುನಿಲ್ ಚೆಟ್ರಿ (Sunil Chhetri) ಅವರನ್ನು ಪ್ರಶಸ್ತಿ ಸಮಾರಂಭದ ವೇಳೆ ಬಂಗಾಳದ ಗವರ್ನರ್ (Governor) ಲಾ ಗಣೇಶನ್ (La Ganesan) ಫೋಟೋಗಾಗಿ (Photo) ತಳ್ಳಿದ ಪ್ರಸಂಗವೊಂದು ನಡೆದಿದೆ.
Advertisement
ಡುರಾಂಡ್ ಕಪ್ 2022 ಫೈನಲ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಿತು. ಫೈನಲ್‍ನಲ್ಲಿ ಬೆಂಗಳೂರು ಎಫ್‍ಸಿ ಮತ್ತು ಮುಂಬೈ ಸಿಟಿ ಎಫ್‍ಸಿ (Mumbai City FC) ತಂಡಗಳು ಕಾದಾಟ ನಡೆಸಿದವು. ರೋಚಕ ಹೋರಾಟದಲ್ಲಿ ಬೆಂಗಳೂರು ಎಫ್‍ಸಿ ತಂಡ ಮುಂಬೈ ವಿರುದ್ಧ 2-1 ಅಂತರದ ಜಯದೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿತು. ಇದನ್ನೂ ಓದಿ: ನಮ್ದು ಕಲ್ಲಂಗಡಿಯಾದರೆ ನಿಮ್ದು ಹಾರ್ಪಿಕ್ – ಇಂಡೋ ಪಾಕ್ ಅಭಿಮಾನಿಗಳ ಜೆರ್ಸಿ ಫೈಟ್
Advertisement
Advertisement
ಬಳಿಕ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೆಂಗಳೂರು ಎಫ್‍ಸಿ ತಂಡದ ನಾಯಕ ಸುನಿಲ್ ಚೆಟ್ರಿ ಪ್ರಶಸ್ತಿ ಪಡೆಯಲು ವೇದಿಕೆ ಮೇಲೆ ತೆರಳಿದ್ದಾರೆ. ಈ ವೇಳೆ ಪ್ರಶಸ್ತಿ ಪ್ರಧಾನ ಮಾಡಿದ ಬಂಗಾಳದ ಗವರ್ನರ್ ಲಾ ಗಣೇಶನ್ ಫೋಟೋಗಾಗಿ ಛೆಟ್ರಿಯನ್ನು ತಳ್ಳಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ರಾಹುಲ್ ಗಾಂಧಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ರೋಹಿತ್ – ಆ್ಯಂಕರ್ ಎಡವಟ್ಟು
Advertisement
Sick! When will this stop? They don't know players names, they sit on the dias in a felicitation ceremony for medal winners while athletes sit down. #SunilChhetri so sorry. https://t.co/j99x4aSKsM
— Meha Bhardwaj Alter (@Bhardwajmeha) September 19, 2022
ಇದೀಗ ಈ ಘಟನೆಯ ಸಾಕಷ್ಟು ವೀಡಿಯೋಗಳು ವೈರಲ್ ಆಗುತ್ತಿದ್ದು, ಈ ರಾಜಕಾರಣಿಗಳಿಗೆ ಯಾಕಿಷ್ಟು ಫೋಟೋ ಹುಚ್ಚು ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಕಪ್ ಗೆಲ್ಲಲು ಮೈದಾನದಲ್ಲಿ ಹೋರಾಡಿದವರು ಸುನಿಲ್ ಚೆಟ್ರಿ ಆದರೆ ಫೋಟೋಗೆ ಫೋಸ್ ನೀಡಲು ಒದ್ದಾಡಿದವರು ಗವರ್ನರ್ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿದೆ.