ಬೆಂಗಳೂರು: ಎರಡನೇ ಟೆಸ್ಟ್ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಭಾರತ 5 ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪಿನ್ನರ್ ಆರ್ ಅಶ್ವಿನ್ 6 ವಿಕೆಟ್ ಪಡೆದರೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅತ್ಯುತ್ತಮವಾದ ಕ್ಯಾಚನ್ನು ಹಿಡಿಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ.
28 ನೇ ಓವರ್ ಆರಂಭದಲ್ಲಿ ಆಸ್ಟ್ರೇಲಿಯಾ 101 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಮ್ಯಾಥ್ಯೂ ವೇಡ್ ಕ್ರೀಸ್‍ನಲ್ಲಿದ್ದರು. ಅಶ್ವಿನ್ ಎಸೆದ 5 ಎಸೆತ ಬ್ಯಾಟ್‍ಗೆ ಬಡಿದು ಪ್ಯಾಡ್‍ಗೆ ತಾಗಿ ಮೇಲಕ್ಕೆ ಹಾರಿತು. ಬಾಲ್ ಮೇಲಕ್ಕೆ ಚಿಮ್ಮಿದ ಕೂಡಲೇ ವೃದ್ಧಿಮಾನ್ ಸಹಾ ಡೈವ್ ಹೊಡೆದು ಯಾರೂ ನಿರೀಕ್ಷಿಸದ ಕ್ಯಾಚನ್ನು ಹಿಡಿದೇ ಬಿಟ್ಟಿದ್ದರು.
Advertisement
ಈ ಸೂಪರ್ ಕ್ಯಾಚ್ ಪರಿಣಾಮ ಮ್ಯಾಥ್ಯೂ ವೇಡ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಕಡೆಗೆ ನಿರಾಸೆಯಿಂದ ಹೆಜ್ಜೆ ಹಾಕಿದರೆ, ಕೊಹ್ಲಿ ಪಡೆ ಸಹಾ ಮತ್ತು ಅಶ್ವಿನ್ ರನ್ನು ಅಭಿನಂದಿಸತೊಡಗಿತು.
Advertisement
2010ರಲ್ಲಿ ನಾಗ್ಪುರದಲ್ಲಿ ದಕ್ಷಿಣ ಆಫ್ರಿಕಾದದ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ ಸಹಾ ಇದೂವರೆಗೆ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 43 ಕ್ಯಾಚ್, 8 ಮಂದಿಯನ್ನು ಸ್ಟಂಪ್ ಔಟ್ ಮಾಡಿದ್ದಾರೆ. ಬೆಂಗಳೂರು ಟೆಸ್ಟ್ ಎರಡು ಇನ್ನಿಂಗ್ಸ್ ಗಳಲ್ಲಿ ವೃದ್ಧಿಮಾನ್ ಸಹಾ 1 ಸ್ಟಂಪ್ ಮತ್ತು 4 ಕ್ಯಾಚ್ ಹಿಡಿದಿದ್ದಾರೆ.
Advertisement
ಇದನ್ನೂ ಓದಿ: 11 ರನ್‍ಗಳಿಗೆ 6 ವಿಕೆಟ್ ಪತನ: ಭಾರತಕ್ಕೆ 75 ರನ್ ಗಳ ಜಯ