ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

Public TV
1 Min Read
BEN STOKS

ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದ ತೊರೆದ ಜೋ ರೂಟ್ ಬಳಿಕ ಇದೀಗ ನೂತನ ನಾಯಕನ್ನಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ರನ್ನು ಆಯ್ಕೆ ಮಾಡಿದೆ.

JOE ROOT

ಜೋ ರೂಟ್ ಬಳಿಕ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡುತ್ತಿತ್ತು. ಇದೀಗ ಅಧಿಕೃತವಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಾಯಕನ್ನಾಗಿ ಸ್ಟೋಕ್ಸ್ ನೇಮಕವಾಗಿದೆ ಎಂಬುದನ್ನು ಖಚಿತ ಪಡಿಸಿದೆ.

ಈ ಮೂಲಕ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದ 81ನೇ ನಾಯಕನಾಗಿ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಜೋ ರೂಟ್‍ರಂತೆ ಎಲ್ಲಾ ಮಾದರಿ ಕ್ರಿಕೆಟ್‍ನಲ್ಲೂ ಇಂಗ್ಲೆಂಡ್ ತಂಡಕ್ಕೆ ನೆರವಾಗುವ ಮ್ಯಾಚ್ ವಿನ್ನರ್ ಆಗಿರುವ ಸ್ಟೋಕ್ಸ್‌ಗೆ ಟೆಸ್ಟ್ ತಂಡದ ನಾಯಕನ ಪಟ್ಟ ಕಟ್ಟಲಾಗಿದೆ ಎಂದು ಇಸಿಬಿ ಸ್ಪಷ್ಟಪಡಿಸಿದೆ. ಜೋ ರೂಟ್ ಬಳಿಕ ಸ್ಟೋಕ್ಸ್ ನಾಯಕತ್ವಕ್ಕೆ ಸಮರ್ಥ ಆಟಗಾರ ಎಂದು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದರು.

ಸ್ಟೋಕ್ಸ್ ಇಂಗ್ಲೆಂಡ್ ತಂಡದ ಪರ ಈಗಾಗಲೇ 79 ಟೆಸ್ಟ್ ಪಂದ್ಯಗಳಿಂದ 26 ಅರ್ಧಶತಕ, 11 ಶತಕ, 1 ದ್ವಿಶತಕ ಸಹಿತ 5,061 ರನ್ ಮತ್ತು 174 ವಿಕೆಟ್ ಕಿತ್ತು ಮಿಂಚಿದ್ದಾರೆ. ಇದೀಗ ನಾಯಕನ ಜವಾಬ್ದಾರಿ ಮೂಲಕ ಸ್ಟೋಕ್ಸ್ ತಂಡವನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯವ ಸವಾಲು ಹೊಂದಿದ್ದಾರೆ.

Share This Article