ಬೆಂಗಳೂರು: ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ಅಹಂ ಜಾಸ್ತಿ ಆಗಿದೆ. ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ಮಧು ಬಂಗಾರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಉಸ್ತುವಾರಿ ಸಚಿವರು ಸರಿ ಆಗಿದ್ದಾರೆ. ಆದರೆ ನಮ್ಮ ಉಸ್ತುವಾರಿ ಸಚಿವರಿಗೆ ಅಹಂ ಜಾಸ್ತಿ ಆಗಿದೆ. ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ನಾವು ಶಾಸಕರಲ್ವಾ? ನಮಗೂ ಜವಾಬ್ದಾರಿ ಇಲ್ವಾ? ನಾವೂ ಯಡಿಯೂರಪ್ಪನ (BS Yediyurappa) ಮಕ್ಕಳನ್ನು ಸೋಲಿಸಬೇಕು ಅಂತಾ ಇದ್ದೇವೆ. ರಾಘವೇಂದ್ರನ ಸೋಲಿಸಬೇಕು ಎಂದು ಇದ್ದೇವೆ. ಆದರೆ ನಮ್ಮ ಸಚಿವರು ನಮ್ಮಲ್ಲೇ ಒಡಕು ಮೂಡಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಇನ್ಮುಂದೆ ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ಕಡ್ಡಾಯ
Advertisement
Advertisement
ಮಧು ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ಮಗ. ಅವರ ತಂದೆ ಗರಡಿಯಲ್ಲಿ ಪಳಗಿದವರು ನಾವು. ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗಬೇಕು. ಅವರೇ ಪಕ್ಷವನ್ನು ಒಡೆಯುವುದಲ್ಲ. ಶಿವಮೊಗ್ಗದಲ್ಲಿ (Shivamogga) ಪಕ್ಷ ಒಡೆದು ಎರಡು ಬಣವಾಗಿದೆ. ಅವರೇ ಅದಕ್ಕೆ ಕುಮ್ಮಕ್ಕು ನೀಡುವುದಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಒಬ್ಬ ಪ್ರಬಲ ಆಕಾಂಕ್ಷಿ ಎಂದರು. ಇದನ್ನೂ ಓದಿ: ಸಿಎಂ ಇಂದು ಬೀದರ್ ಪ್ರವಾಸ – ಲೋಕನಾಯಕ ಭೀಮಣ್ಣ ಖಂಡ್ರೆ ಅಭಿನಂದನಾ ಗ್ರಂಥ ಲೋಕಾರ್ಪಣೆ
Advertisement
ಈಶ್ವರಪ್ಪ (KS Eshwarappa) ಅವರದು ಹರಕು ನಾಲಗೆ. ಅವರ ಬಗ್ಗೆ ಮಾತನಾಡಲು ಹೇಸಿಗೆ ಅನಿಸುತ್ತದೆ. ಅಸಹ್ಯವಾಗುತ್ತದೆ. ಈಶ್ವರಪ್ಪ ಒಬ್ಬ ಹಿರಿಯ ನಾಯಕ. ಅವರ ಮೇಲೂ ಕೇಸುಗಳು ಇಲ್ವಾ? ಅವರು ಜೈಲಿಗೆ ಹೋಗ್ತಾರಾ? ಈಶ್ವರಪ್ಪನಂತಹ ಹೇಸಿಗೆ ಮನುಷ್ಯನ ಬಗ್ಗೆ ಹೇಳಲ್ಲ. ಹೇಳಲು ಅಸಹ್ಯವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೀನು ಎಷ್ಟು ಟ್ಯಾಕ್ಸ್ ಕಟ್ತೀಯಾ ಹೇಳು – ರೈತನ ವಿರುದ್ಧ ಸುರೇಶ್ ಗರಂ
Advertisement
ಬಿಜೆಪಿ (BJP) ನಾಯಕರು 3 ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎನ್ನುತ್ತಾರೆ. ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಯಡಿಯೂರಪ್ಪ ಅವತ್ತು ಚುನಾವಣೆಯಲ್ಲಿ ಮಿಷನ್ 150 ಅಂದರು. ಬಿಜೆಪಿ 65 ಸ್ಥಾನಕ್ಕೆ ಬಂತು. ಈಗ ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎನ್ನುತ್ತಾರೆ. ಯಾಕೆ ಅವರ ಮಗ ಅಧ್ಯಕ್ಷರಾದ ಕೂಡಲೇ ಪಕ್ಷ ಆಧಿಕಾರಕ್ಕೆ ಬರುತ್ತಾ? ಹಾಗಾದರೆ ಅವತ್ತು ಯಾಕೆ ಬರಲಿಲ್ಲ? ಹಾಗಾದರೆ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಮೋಸ ಮಾಡಿದ್ರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಇಂದು ಸಂಜೆ ಹೈದರಾಬಾದ್ಗೆ ತೆರಳಲಿದ್ದಾರೆ ಟ್ರಬಲ್ ಶೂಟರ್ ಡಿಕೆಶಿ