ಶಿವಮೊಗ್ಗ: ನಾನಾಗಲಿ, ನಮ್ಮ ಮನೆಯವರಾಗಲಿ ಮರಳು ಗಣಿಗಾರಿಕೆ ಮಾಡುವವರಿಂದ, ಮರಳು ಲಾರಿಯವರಿಂದ ಹಣ ಪಡೆದಿಲ್ಲ. ಈ ಬಗ್ಗೆ ನಾನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಶಾಸಕ ಹರತಾಳು ಹಾಲಪ್ಪ ಸವಾಲು ಹಾಕಿದ್ದಾರೆ.
ವಿಧಾನ ಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಜಿಲ್ಲೆಯ ಸಾಗರದ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಟಾಕ್‌ವಾರ್ ಜೋರಾಗಿದೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಮರಳು ಲಾರಿಯವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಳೆದ ಎರಡು ದಿನದ ಹಿಂದೆ ಸುದ್ದಿಗೋಪ್ಠಿ ನಡೆಸಿ ಆರೋಪ ಮಾಡಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಸೋಲಿಗೆ ದುಡ್ಡು ವಿಳಂಬವೇ ಕಾರಣ- ಮೇಲ್ಮನೆ ಸೋಲಿನ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ
ಮಾಜಿ ಶಾಸಕರ ಆರೋಪಕ್ಕೆ ತಿರುಗೇಟು ನೀಡಿರುವ ಹರತಾಳು ಹಾಲಪ್ಪ, ನಾನಾಗಲಿ, ನಮ್ಮ ಮನೆಯವರಾಗಲಿ ಮರಳು ಗಣಿಗಾರಿಕೆ ಮಾಡುವವರಿಂದ, ಮರಳು ಲಾರಿಯವರಿಂದ ಹಣ ಪಡೆದಿಲ್ಲ. ಈ ಬಗ್ಗೆ ನಾನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ. ನಾನು ಮರಳಿನವರಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಫೆಬ್ರವರಿ 13 ರಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಆರೋಪ ಮಾಡಿರುವ ಬೇಳೂರು ಗೋಪಾಲಕೃಷ್ಣ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕು ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‍ಗೆ ಟ್ರಾವೆಲ್ ಬ್ಯಾಗ್‍ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ