ಮನೆಯ ಹೊರಗಡೆ ಹೋದಂತಹ ಸಂದರ್ಭದಲ್ಲಿ ನಾವು ನೋಡಲು ಚೆನ್ನಾಗಿ ಕಾಣ್ಬೇಕು ಅನ್ನೋ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತಮ್ಮ ಅಂದ ಚಂದ ಹೆಚ್ಚು ಮಾಡುವ ಸ್ಟೈಲಿಶ್ ಬಟ್ಟೆಗಳೆಂದರೆ ಬಹಳ ಇಷ್ಟ. ಮಾರುಕಟ್ಟೆಯಲ್ಲೂ ಹಲವಾರು ಚೂಡಿದಾರ್, ಸಲ್ವಾರ್ ಸೂಟ್, ಜೀನ್ಸ್, ಕ್ಯಾಶುವಲ್ ವೇರ್ ಇತ್ಯಾದಿಗಳು ಮಹಿಳೆಯರಿಗೆ ಪ್ರಿಯವಾಗಿಯೇ ಸಿಗಲಿವೆ.
Advertisement
ಇತ್ತೀಚೆಗೆ ಹೊಸ ಟ್ರೆಂಡ್ ಶುರುವಾಗಿದೆ. ಪ್ಯಾಂಟ್ ಧರಿಸುವವರು ಹಾಗೂ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಶಾರ್ಟ್ ಬೆಲ್ಟ್‌ಗಳನ್ನು ಬಳಸುತ್ತಾರೆ. ಶರ್ಟ್ ಪ್ಯಾಂಟ್ ಅಲ್ಲದೆ ಮಹಿಳೆಯರ ಡ್ರೆಸ್ ಗೂ ಈಗ ಬೆಲ್ಟ್ ಧರಿಸುತ್ತಾರೆ. ತಮ್ಮ ಡ್ರೆಸ್ ಮೇಲೆ ಬಣ್ಣ ಬಣ್ಣದ, ವಿಭಿನ್ನ ಶೈಲಿಯ ಬೆಲ್ಟ್‌ಗಳನ್ನು ಧರಿಸುತ್ತಾರೆ.
Advertisement
ಹೌದು ಸಿಂಪಲ್ ಆದ ಸೀರೆಗೂ ಗ್ರ‍್ಯಾಂಡ್ ಆಗಿರೋ ಬೆಲ್ಟ್ ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಹಾಗೆಯೇ ಟೀ ಶರ್ಟ್ ಹಾಗೂ ಶಾರ್ಟ್ ಸ್ಕರ್ಟ್‌ಗಳಿಗೆ ಹೊಂದಿಕೆಯಾಗುವ ಬೆಲ್ಟ್‌ಗಳನ್ನು ಧರಿಸುವುದು ನಿಮಗೆ ಹೊಸ ಲುಕ್ ನೀಡುತ್ತದೆ. ಅವುಗಳ ಬಗೆಯನ್ನಿಲ್ಲಿ ನೋಡೋಣ…
Advertisement
Advertisement
ನೀಳ ದೇಹಕ್ಕುಂಟು ಬೆಲ್ಟ್: ನಿಮ್ಮ ದೇಹವು ನೇರವಾಗಿದ್ದರೆ, ಮಧ್ಯಮ ಅಗಲದ ಡಾರ್ಕ್ ಬೆಲ್ಟ್ ಅನ್ನು ಆಯ್ಕೆ ಮಾಡಿ ಅಥವಾ ರಫಲ್ಸ್ (ಹುಡುಗರೂ ಧರಿಸಬಹುದಾದ ಲೆದರ್ ಬೆಲ್ಟ್) ಹೊಂದಿರುವ ಫ್ಯಾಬ್ರಿಕ್ ಬೆಲ್ಟ್ ಧರಿಸಿ ಕೊಳ್ಳಬಹುದು.
ಬಳ್ಳಿ ನಡುವಿಗೂ ಬೆಲ್ಟ್: ಕೆಲ ಹುಡುಗಿಯರು ಹಾಗೂ ಮಹಿಳೆಯರು ತೀರಾ ಸಣ್ಣಗಿರುವವರು ಕಡಿಮೆ ಅಗಲದ ಬೆಲ್ಟ್‌ಗಳನ್ನು ಧರಿಸುತ್ತಾರೆ. ಬಳ್ಳಿಯಂತೆ ಬಳುಕುವ ನಡುವಿಗೆ ಆಕರ್ಷಕವೆಂದರೆ ಲೋಹ ಅಥವಾ ಚರ್ಮದಿಂದ ಮಾಡಿದ ಬೆಲ್ಟ್. ಇಂತಹವರು ಹೆಚ್ಚು ಅಗಲವಾದ ಬೆಲ್ಟ್‌ಗಳನ್ನು ಧರಿಸುವುದರಿಂದ ದೇಹಕ್ಕೆ ಬ್ಯಾಂಡೇಜ್ ಸುತ್ತಿದಂತೆ ಕಾಣುತ್ತದೆ.
ಶಾರ್ಟ್‌ಸ್ಕರ್ಟ್‌ಗೆ ಒಪ್ಪುವ ಬೆಲ್ಟ್: ನಿಮ್ಮ ಉಡುಪನ್ನು ಎದ್ದು ಕಾಣುವಂತೆ ಮಾಡಲು ಅಗಲವಾದ ಕಪ್ಪು ಬೆಲ್ಟ್ ಪರ್ಫೆಕ್ಟ್ ಆಗಿರುತ್ತದೆ. ಉದಾಹರಣೆಗೆ ನೀವು ಬಿಳಿ ಶರ್ಟ್ ಹಾಗೂ ಹೂವಿನ ಬಾರ್ಡರ್‌ವುಳ್ಳ ಸ್ಕರ್ಟ್ ಧರಿಸಿದರೆ, ಅದಕ್ಕೆ ಕಪ್ಪು ಬೆಲ್ಟ್ ಸೂಟ್ ಆಗುತ್ತದೆ.
ಫಾರ್ಮಲ್ ಸೂಟ್ಸ್: ಕೆಲಸದ ಸ್ಥಳಗಳಲ್ಲಿ ಸೂಟ್ಸ್ ಧರಿಸುವ ಮಹಿಳೆಯರು ತಿಳಿ ಕಂದು ಅಥವಾ ಕಪ್ಪು ಚರ್ಮದ ಬೆಲ್ಟ್ ಅನ್ನು ಧರಿಸುವುದು ಉತ್ತಮ. ಮೆರೂನ್, ಗಾಢ ಹಸಿರು ಅಥವಾ ರಕ್ತ ಚಂದನ ಬಣ್ಣದ ಬೆಲ್ಟ್‌ಗಳನ್ನು ಪ್ರಯತ್ನಿಸಬಹುದು.
ಜೀನ್ಸ್ ಲುಕ್: ಸೂಪರ್ ಕ್ಯಾಶ್ಯುಯಲ್ ನೋಟಕ್ಕಾಗಿ ಜೀನ್ಸ್ ಧರಿಸುವ ಯುವತಿಯರು ಹಾಗೂ ಮಹಿಳೆಯರು ಕೊಂಚ ಅಗಲವಾದ ಬೆಲ್ಟ್ ಧರಿಸುವುದು ಒಳ್ಳೆಯದು. ಇವು ನಿಮ್ಮನ್ನು ಮತ್ತಷ್ಟು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.