ಕಿರುತೆರೆಗೆ ಕಾಲಿಟ್ಟ ‘ಬೆಳ್ಳುಳ್ಳಿ ಕಬಾಬ್’ ಚಂದ್ರು

Public TV
2 Min Read
FotoJet 1 4

ತ್ತೀಚೆಗೆ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಹೆಚ್ಚು ಕೇಳಿ ಬರುವ ಡೈಲಾಗ್ ಅಂದ್ರೆ, ರಾಹುಲಾ ಸ್ವಲ್ಪ ಅಲ್ಲಾಡ್ಸಪ್ಪ ಅಂತ. ಈ ಡೈಲಾಗ್ ಹೇಳಿದವರು ಚಂದ್ರು. ಹೌದು, ಇವರ ‘ಬೆಳ್ಳುಳ್ಳಿ ಕಬಾಬ್’ (Bellulli Kabab Chandru) ರೆಸಿಪಿ ಸಖತ್ ವೈರಲ್ ಆಗಿತ್ತು. ಅದರಲ್ಲೂ ಚಂದ್ರು ಅವರು ಅಡುಗೆ ಮಾಡುವಾಗ ಹೇಳುವ ‘ಒನ್ಸ್ ಮೋರ್ ಒನ್ಸ್ ಮೋರ್’, ‘ಸ್ವಲ್ಪ ರುಬ್ಬಿಕೊಡಪ್ಪ ರಾಹುಲಾ’ ಡೈಲಾಗ್‌ಗಳು ಸಖತ್ ಫೇಮಸ್ ಆಗಿತ್ತು. ಇದೀಗ ಚಂದ್ರು ಅವರು ಟಿವಿ ಪರದೆಯಲ್ಲಿ ಅಡುಗೆ ಮೂಲಕ ರಂಜಿಸಲು ರೆಡಿಯಾಗಿದ್ದಾರೆ.

saviruchi

ಅಂದಹಾಗೆ, ಈ ಚಂದ್ರು (Chandru) ಸಿನಿಮಾರಂಗದಲ್ಲೇ ಕೆಲಸ ಮಾಡುತ್ತಿದ್ದವರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಹೌದು, ಮೂಲತಃ ಮೇಕಪ್ ಮ್ಯಾನ್ ಆಗಿದ್ದ ಚಂದ್ರು, ನಟಿ ಮಾಲಾಶ್ರೀ ಅವರ ಜೊತೆಗೂ ಕೆಲಸ ಮಾಡಿಕೊಂಡಿದ್ದರು. ಅಣ್ಣಾವ್ರ ಕುಟುಂಬದ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಚಂದ್ರು, ಸದ್ಯ ‘ಬೆಳ್ಳುಳ್ಳಿ ಕಬಾಬ್’ ಮೂಲಕ ವೈರಲ್ ಆಗಿದ್ದಾರೆ. ಸದ್ಯ ಸವಿರುಚಿ ಅಡುಗೆ ಕಾರ್ಯಕ್ರಮಕ್ಕಾಗಿ ಕಿರುತೆರೆಗೆ ಕಾಲಿಟ್ಟಿದ್ದಾರೆ.

belluli kabab chandru 1 1

ಕನ್ನಡಿಗರಿಗೆ ಸ್ವಾದಿಷ್ಟ ಮನರಂಜನೆಯನ್ನು ಉಣಬಡಿಸುತ್ತಾ ಬಂದಿರುವ ಕಲರ್ಸ್ ಕನ್ನಡ ವಾಹಿನಿ ತನ್ನ ಜನಪ್ರಿಯ ಅಡುಗೆ ಕಾರ್ಯಕ್ರಮ ‘ಸವಿರುಚಿ’ಯನ್ನು ಮತ್ತೆ ಆರಂಭಿಸಲಿದೆ. ಯುಗಾದಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂತೆ ‘ಸವಿರುಚಿ’ಯ ಹೊಸ ಕಂತುಗಳು ಮೂಡಿಬರಲಿವೆ. ಏಪ್ರಿಲ್ 9ರಂದು ಮಧ್ಯಾಹ್ನ 12ಗಂಟೆಗೆ ‘ಸವಿರುಚಿ’ಯ ಹೊಸ ಸೀಸನ್ ಶುರುವಾಗುತ್ತಿದೆ. ಇದನ್ನೂ ಓದಿ:‘ಪುಷ್ಪ’ ಡೈರೆಕ್ಟರ್ ಜೊತೆ ಮತ್ತೆ ಕೈ ಜೋಡಿಸಿದ ರಾಮ್ ಚರಣ್

belluli kabab

ಹೊಸ ಸೀಸನ್ ‘ಸವಿರುಚಿ’ಯಲ್ಲಿ ಹಲವು ಹೊಸ ಅಂಶಗಳು ಇರಲಿವೆ. ಕರ್ನಾಟಕದ ಮೂಲೆಮೂಲೆಗಳ ಪಾಕಪ್ರವೀಣರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮೂಲೆಮೂಲೆಗಳಿಗೆ ತೆರಳಿ ಅಲ್ಲಿನ ಸಾಂಪ್ರದಾಯಿಕ ಅಡುಗೆಯನ್ನು ಪರಿಚಯಿಸುವುದರಿಂದಾಗಿ ಈ ಸೀಸನ್ನು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ.

FotoJet 10

ಯುಗಾದಿ ಹಬ್ಬದ ದಿನವೇ ಹೊಸ ಸೀಸನ್ ಶುರುವಾಗುತ್ತಿರುವುದರ ಬಗ್ಗೆ ಮಾತನಾಡಿದ ವಾಹಿನಿಯ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಹಬ್ಬ ಅಂದರೆ ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ರುಚಿರುಚಿಯಾದ ಅಡುಗೆಯನ್ನು ಆನಂದಿಸುವುದು. ಈ ಯುಗಾದಿಯ ಸಡಗರವನ್ನು ‘ಸವಿರುಚಿ’ಯ ಹೊಸ ಸೀಸನ್ ಇನ್ನಷ್ಟು ರಸವತ್ತಾಗಿಸಲಿದೆ ಎಂದರು. ನಮ್ಮ ವೀಕ್ಷಕರೆಲ್ಲರೂ ನಮ್ಮ ಕುಟುಂಬದವರೇ, ಅವರೆಲ್ಲರಿಗೂ ಯುಗಾದಿಯ ಶುಭಾಶಯ ಕೋರುತ್ತಾ ಉಡುಗೊರೆಯಾಗಿ ‘ಸವಿರುಚಿ’ಯ (Saviruchi) ಹೊಸ ಸೀಸನ್ನನ್ನು ಅವರಿಗೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಬೆಳ್ಳುಳ್ಳಿ ಕಬಾಬ್ ಮೂಲಕ ಎಲ್ಲೆಡೆ ಹೆಸರಾಗಿರುವ ಬಿ.ಕೆ ಚಂದ್ರು (B.K Chandru) ಕೂಡ ಇರುವುದು ಮಜವನ್ನು ಮತ್ತೊಂದು ಹಂತಕ್ಕೆ ಏರಿಸಲಿದೆ. ‘ಸವಿರುಚಿ’ಯಲ್ಲಿ ಬರೀ ಅಡುಗೆ ಮಾಡುವುದಷ್ಟೇ ಅಲ್ಲದೆ, ಅದರ ಪೌಷ್ಟಿಕತೆಯ ಕುರಿತು ತಜ್ಞರ ಅಭಿಪ್ರಾಯಗಳೂ ಇರುವುದು ಈ ಕಾರ್ಯಕ್ರಮವನ್ನು ವಿಶೇಷಗೊಳಿಸಲಿವೆ.ಈ ಕಾರ್ಯಕ್ರಮವನ್ನು ನಿರೂಪಕಿ-ನಟಿ ಜಾಹ್ನವಿ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಒಂದು ಚೆಂದದ ಕಾರ್ಯಕ್ರಮದ ಪರಿಮಳ ನಿಮ್ಮ ಮೂಗಿಗೆ ಬರತೊಡಗಿದ್ದರೆ ಸವಿರುಚಿ ನೋಡಲು ಮರೆಯಬೇಡಿ.

Share This Article