ಬಳ್ಳಾರಿ: ಜಿಲ್ಲಾಧಿಕಾರಿಯೊಬ್ಬರು ಬಡವರಿಗೆ ಸೂರನ್ನು ಕಲ್ಪಿಸಿರುವುದನ್ನು ನೋಡಿ ಪ್ರೇರಣೆಗೊಂಡು ತಾನು ಕೂಡ ಜಿಲ್ಲಾಧಿಕಾರಿಯಾಗಬೇಕೆನ್ನುವ ಮಹದಾಸೆ ಹೊತ್ತ ಬಳ್ಳಾರಿಯ ಯುವತಿ ಇದೀಗ ಯುಪಿಎಸ್‍ಸಿ(ಕೇಂದ್ರ ಲೋಕಸ ಸೇವಾ ಆಯೋಗ) ಪರೀಕ್ಷೆಯಲ್ಲಿ ರಾಜ್ಯಕ್ಕೆ 14ನೇ ರ್‍ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
Advertisement
ಬಳ್ಳಾರಿ ತಾಲೂಕಿನ ಸಂಗನಕಲ್ ನಿವಾಸಿ ವೆಂಕಟರಮಣಪ್ಪ ಮತ್ತು ಸುಮಾ ದಂಪತಿಯ ಮಗಳಾದ ಅಶ್ವಿಜಾ ಈ ಸಾಧನೆ ಮಾಡಿದ ಯುವತಿ. ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿರುವ ತಂದೆಯೊಂದಿಗೆ ಕೆಲ ವರ್ಷಗಳ ಹಿಂದೆ ಬಳ್ಳಾರಿ ತಾಲೂಕಿನ ಗುಡಾರ ನಗರಕ್ಕೆ ಹೋದಾಗ ಅಂದಿನ ಬಳ್ಳಾರಿ ಜಿಲ್ಲಾಧಿಕಾರಿ ಜಾವೀದ್ ಆಖ್ತರ್ ಗೂಡಾರ ನಗರ ನಿವಾಸಿಗಳಿಗೆ 200 ಮನೆಗಳನ್ನು ನಿರ್ಮಿಸಿದ್ದರಂತೆ. ಅದನ್ನು ನೋಡಿ ಪ್ರೇರಣೆಗೊಂಡ ಅಶ್ವಿಜಾ, ತಾನೂ ಜಿಲ್ಲಾಧಿಕಾರಿಯಾಗಿ ಬಡವರ ಸೇವೆ ಮಾಡಬೇಕೆನ್ನುವ ಮಹದಾಸೆ ಹೊಂದಿದ್ದರು. ಇದನ್ನೂ ಓದಿ: ಯುಪಿಎಸ್‍ಸಿ ಫಲಿತಾಂಶ ಪ್ರಕಟ: ರಾಹುಲ್ ಶರಣಪ್ಪ ರಾಜ್ಯಕ್ಕೆ ಟಾಪ್
Advertisement
Advertisement
ಅಂದಿನಿಂದಲೇ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅಶ್ವಿಜಾ, ಬಳ್ಳಾರಿಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮುಗಿಸಿ 2014-15ನೇ ಸಾಲಲ್ಲಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ್ರು. ನಂತರ ನಿರಂತರ ಅಧ್ಯಯನ ಮಾಡುವ ಮೂಲಕ ಇದೀಗ ಯುಪಿಎಸ್‍ಸಿ ಯಲ್ಲಿ ರಾಜ್ಯಕ್ಕೆ 14ನೇ ಮತ್ತು ಒಟ್ಟಾರೆ 423ನೇ ರ್‍ಯಾಂಕ್ ಪಡೆದು ಬಳ್ಳಾರಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
Advertisement
ಯುಗಾದಿ ಹಬ್ಬದ ದಿನವೇ ಪರೀಕ್ಷೆ ಫಲಿತಾಂಶ ಬಂದಿರುವುದು ಅಶ್ವೀಜಾ ಕುಟಂಬದಲ್ಲಿ ಡಬಲ್ ಖುಷಿ ಮನೆ ಮಾಡಿತ್ತು.
https://www.youtube.com/watch?v=6uU5qe5L5LU