Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾರಲ್ಲಿ ಆರ್. ಅಶೋಕ್ ಪುತ್ರ ಇರಲಿಲ್ಲ: ಎಸ್‍ಪಿ ಸಿ.ಕೆ ಬಾಬಾ ಸ್ಪಷ್ಟನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bellary | ಕಾರಲ್ಲಿ ಆರ್. ಅಶೋಕ್ ಪುತ್ರ ಇರಲಿಲ್ಲ: ಎಸ್‍ಪಿ ಸಿ.ಕೆ ಬಾಬಾ ಸ್ಪಷ್ಟನೆ

Bellary

ಕಾರಲ್ಲಿ ಆರ್. ಅಶೋಕ್ ಪುತ್ರ ಇರಲಿಲ್ಲ: ಎಸ್‍ಪಿ ಸಿ.ಕೆ ಬಾಬಾ ಸ್ಪಷ್ಟನೆ

Public TV
Last updated: February 13, 2020 3:30 pm
Public TV
Share
3 Min Read
BLY SP CK BABA
SHARE

ಬಳ್ಳಾರಿ: ಅಪಘಾತ ಪ್ರಕರಣಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದ್ದು, ಅಪಘಾತವಾದಾಗ ಕಾರಿನಲ್ಲಿ ಸಚಿವ ಅಶೋಕ್ ಪುತ್ರ ಶರತ್ ಇರಲಿಲ್ಲ ಎಂದು ಎಸ್‍ಪಿ ಸಿ.ಕೆ ಬಾಬಾ ಅವರು ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಪಘಾತ ನಡೆದ ದಿನ ಯುವಕ ರಾಹುಲ್ ಕಾರು ಓಡಿಸುತ್ತಿದ್ದ. ಕಾರಿನಲ್ಲಿದ್ದ ಐವರಲ್ಲಿ ಸಚಿನ್ ಮೃತಪಟ್ಟಿದ್ದಾರೆ. ಗ್ರಾಮದ ರವಿ ನಾಯಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎಫ್‍ಐಆರ್ ದಾಖಲಿಸುವ ವೇಳೆ ಹೆಸರನ್ನು ತಪ್ಪಾಗಿ ದಾಖಲಿಸಲಾಗಿದೆ. ಕಾರು ಯಾರಿಗೆ ಸೇರಿದ್ದು ಎಂಬುವುದು ತನಿಖೆ ನಡೆಸಲಾಗುತ್ತೆ ಎಂದರು. ಇದನ್ನೂ ಓದಿ: ಹೌದು, ಈ ಫೋಟೋದಲ್ಲಿರುವ ವ್ಯಕ್ತಿ ಕಾರಿನಲ್ಲಿದ್ದರು: ಪ್ರತ್ಯಕ್ಷದರ್ಶಿ

ashok son sharth accident 3 1

ಫೆಬ್ರವರಿ 10 ರಂದು ಮಧ್ಯಾಹ್ನ ಮರಿಯಮ್ಮನ ಹಳ್ಳಿ ಬಳಿ ಅಪಘಾತ ಆಗಿದೆ, ಮರ್ಸಿಡೀಜ್ ಬೆಂಜ್ ಕಾರನಿಂದ ಅಪಘಾತ ಮಾಡಲಾಗಿದೆ. ಸಚಿವ ಆರ್ ಅಶೋಕ್ ಅವರ ಪುತ್ರ ವಾಹನದಲ್ಲಿ ಇರಲಿಲ್ಲ. ಯಾವುದೇ ಕಾರಣಕ್ಕೂ ನಾವು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿಲ್ಲ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಪಘಾತವಾದ ಕಾರಿಗೆ ನಮ್ಗೂ ಸಂಬಂಧವಿಲ್ಲ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಅಶೋಕ್

R Ashok Son Car Accident Son 1 e1581587065343

ಕಾರಿನಲ್ಲಿ ಐವರಿದ್ದರು, ಅವರ ಪೈಕಿ ಓರ್ವ ಮೃತಪಟ್ಟಿದ್ದಾನೆ, ಕಾರು ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಿದ್ದೇವೆ. ಅದು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಅತಿಯಾದ ವೇಗ ಅಪಘಾತಕ್ಕೆ ಕಾರಣ ಆಗಿರಬಹುದು. ಸಚಿವರ ಪುತ್ರ ಇದ್ದರು ಎಂಬುದು ವದಂತಿಯಷ್ಟೇ. ಕಾರು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?

ashok 1

ಏನಿದು ಪ್ರಕರಣ?
ಕೆಎ-05, ಎಂಡಬ್ಲ್ಯು 357 ನಂಬರಿನ ಬೆಂಜ್ ಕಾರು ಬಳ್ಳಾರಿಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಇಬ್ಬರ ಬಲಿಯನ್ನು ತೆಗೆದುಕೊಂಡಿತ್ತು. ದುರ್ಗಾ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗದಲ್ಲಿ ಬಂದ ಕಾರು ರಸ್ತೆ ಬದಿಯ ಚಹಾದ ಅಂಗಡಿ ಬಳಿ ನಿಂತಿದ್ದ ರವಿ ನಾಯಕ್(19) ಅವರಿಗೆ ಗುದ್ದಿದೆ. ನಂತರ ಕಾರು ಸುಮಾರು 100 ಮೀಟರ್ ದೂರದವರೆಗೆ ರವಿ ಅವರನ್ನು ಬೆಂಜ್ ಕಾರು ತಳ್ಳಿಕೊಂಡು ಹೋಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮತ್ತೀಕೆರೆ ನಿವಾಸಿ ಸಚಿನ್ ಮೃತಪಟ್ಟಿದ್ದಾರೆ.

ಆರ್.ಅಶೋಕ್ ಹೇಳಿಕೆ:
ಕಳೆದ ಮೂರು ದಿನದ ಹಿಂದೆ ಹಂಪಿಯಿಂದ ಬರಬೇಕಾದ್ರೆ ಬಳ್ಳಾರಿ ಭಾಗದಲ್ಲಿ ಅಪಘಾತವಾಗಿದೆ. ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿದ್ದರಿಂದ ಪ್ರತಿಕ್ರಿಯೆ ನೀಡಲು ಬಂದಿದ್ದೇನೆ. ಅಪಘಾತದ ಬಳಿಕ ಸಾವನ್ನಪ್ಪಿದ ಯುವಕನ ಕುಟುಂಬಸ್ಥರೇ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ತನಿಖಾ ಹಂತದಲ್ಲಿ ಇರೋದರಿಂದ ಮಂತ್ರಿಯಾಗಿರುವುದರಿಂದ ಹೆಚ್ಚು ಮಾತನಾಡಬಾರದು. ತನಿಖೆ ವೇಳೆ ಹೇಳಿಕೆ ನೀಡಿದ್ರೆ ಕಾನೂನಿನ ಪ್ರಕಾರ ಸರಿ ಅಲ್ಲ. ಕಾನೂನು ಮೀರಿ ಯಾರು ಇಲ್ಲ. ತನಿಖೆ ವೇಳೆ ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ.

ಅಪಘಾತವಾದ ಕಾರಿಗೂ ಹಾಗೂ ಅದು ನೋಂದಣಿ ಹೊಂದಿರುವ ಸಂಸ್ಥೆಗೂ ನಮಗೆ ಸಂಬಂಧವಿಲ್ಲ. ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು ಮತ್ತು ಎಲ್ಲರೂ ಗಾಯಗೊಂಡಿದ್ದಾರೆ. ಪೊಲೀಸರ ತನಿಖೆ ವೇಳೆ ಎಲ್ಲವೂ ಬಹಿರಂಗವಾಗಲಿದೆ. ಹಾಗಾಗಿ ಅಪಘಾತಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಮಾತನಾಡಲ್ಲ. ಮಾಧ್ಯಮಗಳಲ್ಲಿ ನನ್ನ ಮಗ ಸಹ ಕಾರಿನಲ್ಲಿದ್ದ ಎಂದು ಬಿತ್ತರವಾಗುತ್ತಿದೆ. ಆದ್ರೆ ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲಾರೆ. ಅಪಘಾತದಲ್ಲಿ ಸಾವನ್ನಪ್ಪಿದವರ ಬಗ್ಗೆ ವಿಷಾದವಿದೆ ಎಂದರು.

ದಾಖಲಾಗಿರುವ ಎಫ್‍ಐಆರ್ ನಲ್ಲಿ ನನ್ನ ಮಗನ ಹೆಸರಿಲ್ಲ. ಅಪಘಾತವಾದ ಕಾರಿನಲ್ಲಿ ನನ್ನ ಮಗನಿದ್ದ ಎಂಬುದರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದ್ರೆ ತಮ್ಮ ಮಗ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ನೀಡಲು ಸಚಿವರು ಹಿಂದೇಟು ಹಾಕಿದರು. ಈ ವೇಳೆ ಮಗನಿಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡದೇ ಈಗ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಎಲ್ಲ ಪ್ರಶ್ನೆಗಳಿಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಜಾಣ ಉತ್ತರ ನೀಡಿದರು.

TAGGED:bellarycarPublic TVr ashoksonSP C.K Babaಆರ್ ಅಶೋಕ್ಎಸ್‍ಪಿ ಸಿ.ಕೆ ಬಾಬಾಕಾರುಪಬ್ಲಿಕ್ ಟಿವಿಬಳ್ಳಾರಿಮಂಗ
Share This Article
Facebook Whatsapp Whatsapp Telegram

Cinema news

KD Vulgar Song Controversy I will write and release a new song Director Prem apologizes 1
ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌
Bengaluru City Cinema Districts Latest Main Post
KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood
darshan vijayalakshmi
ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ
Cinema Latest Sandalwood Top Stories
Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood

You Might Also Like

tulsi gabbard
Latest

ಅಮೆರಿಕಕ್ಕೆ ಪಾಕಿಸ್ತಾನದಿಂದ ಪರಮಾಣು ಬೆದರಿಕೆಯಿದೆ: ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್

Public TV
By Public TV
1 hour ago
18 03
Big Bulletin

ಬಿಗ್‌ ಬುಲೆಟಿನ್‌ 18 March 2026 ಭಾಗ-1

Public TV
By Public TV
1 hour ago
02 12
Big Bulletin

ಬಿಗ್‌ ಬುಲೆಟಿನ್‌ 18 March 2026 ಭಾಗ-2

Public TV
By Public TV
1 hour ago
03 12
Big Bulletin

ಬಿಗ್‌ ಬುಲೆಟಿನ್‌ 18 March 2026 ಭಾಗ-3

Public TV
By Public TV
1 hour ago
Parappana agrahara 1
Bengaluru City

ಜೈಲಿನಲ್ಲಿ ಮಹಿಳಾ ಖೈದಿಗಳ ಡ್ರಗ್ಸ್ ಟೆಸ್ಟ್ ಪಾಸಿಟಿವ್ ರಿಪೋರ್ಟ್ – ಅಧಿಕಾರಿಗಳೇ ಶಾಕ್

Public TV
By Public TV
2 hours ago
Bagalkote by election CM Siddaramaiah meeting with HY Meti Family
Bagalkot

ಉಪಚುನಾವಣೆ| ಸಿಎಂ ಕಚೇರಿಯಲ್ಲಿ ಸಂಧಾನ ಸಭೆಗೆ ವ್ಯಾಪಕ ಟೀಕೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?