ಬಳ್ಳಾರಿ: ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಬಿರುಕುಗಳಿಂದ ತುಂಬಿ ಹೋಗಿವೆ. ಹಳೆ ಕಟ್ಟಡ ಸರ್ಕಾರ ಡೆಮಾಲಿಶ್ ಮಾಡಿ ಅಂತ ಹೇಳಿದ್ರು. ಇದುವರೆಗೂ ತೆರವುಗೊಳಿಸುವ ಕೆಲಸ ಮಾಡದಿರುವುದಕ್ಕೆ ಸಾರ್ವಜನಿಕರಲ್ಲಿ ಆಕ್ರೋಶ ಕೇಳಿ ಬಂದರೆ, ಇತ್ತ ಆಸ್ಪತ್ರೆಗೆ ಬರೋ ಜನರು ಜೀವ ಕೈಯಲ್ಲಿ ಹಿಡಿಕೊಂಡು ಓಡಾಡುವಂತಾಗಿದೆ.
Advertisement
ಹೌದು. ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಳ್ಳಾರಿಯ ಪ್ರತಿಷ್ಠಿತ ವಿಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳು, ರೋಗಿಗಳ ಸಂಬಂಧಿಕರಿಗೆ ಪ್ರಾಣ ಭಯ ಶುರುವಾಗಿದೆ. ಚಿಕಿತ್ಸೆಗೆ ದಾಖಲಾಗಬೇಕಂದ್ರೂ ಹಿಂದೆ-ಮುಂದೆ ನೋಡ್ತಿದ್ದಾರೆ. ಯಾಕೆಂದ್ರೆ 70 ವರ್ಷದ ಕಟ್ಟಡ ದಿನದಿಂದ ದಿನಕ್ಕೆ ಶಿಥಿಲಾವಸ್ಥೆಯತ್ತ ಸಾಗ್ತಿದೆ. ಒಟ್ಟು 2 ಅಂತಸ್ತಿನ ಆಸ್ಪತ್ರೆಯಲ್ಲಿ 550 ಹಾಸಿಗೆ ಇದೆ. ಸರಿಯಾದ ನಿರ್ವಹಣೆ ಇಲ್ಲದೇ ಕಟ್ಟಡದ ಮೇಲ್ಚಾವಣಿ ಸೂರುತ್ತಿದೆ.
Advertisement
Advertisement
ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹಲವು ಕಡೆಗಳಲ್ಲಿ ಗೋಡೆಯ ಒಂದು ಭಾಗವೇ ಕಿತ್ತು ಹೋಗಿದೆ. ಆಸ್ಪತ್ರೆ ಹಿಂಭಾಗದಲ್ಲಂತೂ ಬೇಡ ಉಪಕರಣಗಳು. ತೋಟದಂತೆ ಗಿಡಗಂಟೆಗಳು ಬೆಳೆದು ನಿಂತಿವೆ. ನಮ್ಮ ಪ್ರಾಣ ಉಳಿಸಿಕೊಳ್ಳಲು ಚಿಕಿತ್ಸೆಗೆ ಬರುವ ಜನರು ಈ ಕಟ್ಟಡದಲ್ಲೇ ನಮ್ಮ ಜೀವ ಹೋಗಬಹುದು, ಆದಷ್ಟು ಬೇಗ ಕಟ್ಟಡ ತೆರವು ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2
Advertisement
ಕೇವಲ ಆಸ್ಪತ್ರೆಗೆ ಬರುವ ಜನರಷ್ಟೇ ಅಲ್ಲ, ವೈದ್ಯರು, ಸಿಬ್ಬಂದಿಗೂ ಜೀವ ಭೀತಿ ಕಾಡ್ತಿದೆ. ಹಲವು ದಿನಗಳ ಹಿಂದಷ್ಟೇ ಒಟಿಯ ಮೇಲ್ಛಾವಣಿ ಕುಸಿದಿತ್ತು. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈ ಬಗ್ಗೆ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡರನ್ನು ಕೇಳಿದರೆ, ಫೆಬ್ರವರಿಯಲ್ಲಿ ಕಟ್ಟಡ ತೆರವಿಗೆ ಪರ್ಮಿಷನ್ ಸಿಕ್ಕಿದೆ. ಪಿಡಬ್ಲ್ಯೂಡಿ ಇಲಾಖೆ ಇನ್ನೇನು ಕೆಲ ದಿನಗಳಲ್ಲಿ ತೆರವು ಮಾಡಲಿದೆ ಎಂದು ಹೇಳುತ್ತಾರೆ. ಇದನ್ನೂ ಓದಿ: ಖಾರವಾದ ಚಿಕನ್ ಲಿವರ್ ಡ್ರೈ ಮಾಡಿ
ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಆಸ್ಪತ್ರೆ ಎಂದರೆ ಜೀವ ಉಳಿಸುವ ದೇವರಿರುವ ಸ್ಥಳ ಎಂದು ನಂಬಿಕೊಂಡಿರ್ತಾರೆ.. ಆದರೆ. ವಿಮ್ಸ್ ಆಸ್ಪತ್ರೆಯನ್ನು ನೋಡಿದ್ರೇ ರೋಗಿಗಳು ಚಿಕಿತ್ಸೆಗೆ ಬರುವುದಕ್ಕೆ ಹಿಂದೇಟು ಹಾಕಿದ್ದಾರೆ. ಇನ್ನಾದರೂ ಅಪಾಯ ಸಂಭವಿಸುವುದಕ್ಕೂ ಮುನ್ನ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕಿದೆ.