– ಆರೋಪಿಗಳ ಬಂಧನ
ಬಳ್ಳಾರಿ: ಜಿಲ್ಲೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಮರಳು ದಂಧೆಯ ಗುತ್ತಿಗೆ ಪಡೆಯಲು ರಿಂಗ್ ಮಾಡಿಕೊಳ್ಳುತ್ತಿದ್ದ ಗುತ್ತಿಗೆದಾರರ ಮೇಲೆ ಪೊಲೀಸರು, ಐಟಿ, ಕಂದಾಯ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.
ಬಳ್ಳಾರಿ ಹೊರವಲಯದಲ್ಲಿರುವ ಎಂಎಲ್ ಸಿ ಅಲ್ಲವೀರಭದ್ರಪ್ಪ ಒಡೆತನದ ಅಲ್ಲಭವನದಲ್ಲಿ ಭಾನುವಾರ ಸಂಜೆ ಮರಳು ದಂಧೆಕೋರರು, ಗುತ್ತಿಗೆದಾರರು ರಿಂಗಿಂಗ್ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಹಲವು ಗುತ್ತಿಗೆದಾರರನ್ನ ವಶಕ್ಕೆ ಪಡೆಯುವುದಲ್ಲದೇ ಅಪಾರ ಪ್ರಮಾಣದ ಹಣವನ್ನು ಸಹ ಜಪ್ತಿ ಮಾಡಿದ್ದಾರೆ.
Advertisement
Advertisement
ದಾಳಿಯ ವೇಳೆ ಗುತ್ತಿಗೆದಾರರ ಬಳಿ ಸುಮಾರು ಒಂದೂವರೆ ಕೋಟಿ ರೂಪಾಯಿ ಹಣವಿತ್ತೆಂತು ಮೂಲಗಳು ಖಚಿತಪಡಿಸಿವೆ. ಪೊಲೀಸರು, ಐಟಿ, ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆಯೇ ಪರಾರಿಯಾಗಲು ಯತ್ನಿಸಿದ ಗುತ್ತಿಗೆದಾರರನ್ನ ವಶಕ್ಕೆ ಪಡೆಯಲು ಎಸ್ ಸಿ ಅರುಣ ರಂಗರಾಜನ್ ಗಾಳಿಯಲ್ಲಿ ಗುಂಡು ಹಾರಿಸಿ ಹಲವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement
ವಿಚಾರಣೆ ತಡರಾತ್ರಿಯವರೆಗೂ ಮುಂದುವರಿದಿದ್ದು ದಾಳಿ ಹಾಗೂ ವಶಕ್ಕೆ ಪಡೆದ ಹಣದ ಬಗ್ಗೆ ಎಸ್ ಪಿ ಅರುಣ ರಂಗರಾಜನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಬಹಿರಂಗಪಡಿಸಲಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv