ಬಳ್ಳಾರಿ: ಕಂದಾಯ ಸಚಿವ ಆರ್.ಅಶೋಕ್ ಪುತ್ರ ಶರತ್‍ನ ಕಾರು ಅಪಘಾತ ಪ್ರಕರಣಕ್ಕೆ ಹೊಸ ಹೊಸ ಟ್ವಿಸ್ಟ್ ಸಿಗುತ್ತಿದೆ. ಈ ಪ್ರಕರಣಕ್ಕೆ ಅತಿ ದೊಡ್ಡ ತಿರುವು ನೀಡಬಲ್ಲ ವಿಡಿಯೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಮರಿಯಮ್ಮನಹಳ್ಳಿಯಲ್ಲಿ ಫೆಬ್ರವರಿ 10ರಂದು ಅಪಘಾತ ಸಂಭವಿಸಿದ ಬಳಿಕ ಗಾಯಾಳುಗಳನ್ನು ಜೀಪ್‍ನಲ್ಲಿ ಹೊಸಪೇಟೆ ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನವು ಸೆರೆಯಾಗಿದೆ. ಪ್ರಕರಣದ ಬೆನ್ನುಹತ್ತಿದ ಪಬ್ಲಿಕ್ ಟಿವಿಗೆ ವಿಡಿಯೋಗಳು ಲಭ್ಯವಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
Advertisement
Advertisement
ಸೀನ್-1:
ಅಪಘಾತ ಸಂಭವಿಸಿದ ಬಳಿಕ ಅಂದ್ರೆ ಫೆಬ್ರವರಿ 10ರಂದು ಮಧ್ಯಾಹ್ನ 3 ಗಂಟೆ 50 ನಿಮಿಷಕ್ಕೆ ಗಾಯಾಳುಗಳಿದ್ದ ಜೀಪ್ ಆಸ್ಪತ್ರೆಗೆ ಬಂದಿತ್ತು. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದನ್ನೂ ಓದಿ: ಬಳ್ಳಾರಿ ಅಪಘಾತ ಕೇಸ್‍ಗೆ ಹೊಸ ಟ್ವಿಸ್ಟ್ – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವೈದ್ಯ
Advertisement
ಸೀನ್-2:
ಆಸ್ಪತ್ರೆಯ ಆಯಾ, ರವಿ ನಾಯ್ಕ್ ಸೋದರತ್ತೆ ಭಾರತಿ ನಾಯ್ಕ್ ಅವರು ಶುಕ್ರವಾರ ಪಬ್ಲಿಕ್ ಟಿವಿಗೆ ನೀಡಿದ್ದ ಹೇಳಿಕೆ ಸತ್ಯವಾಗಿದೆ. ದೃಶ್ಯ ಎರಡರಲ್ಲಿ ಆಸ್ಪತ್ರೆಗೆ ಬಂದಿದ್ದ ಗಾಯಾಳುಗಳನ್ನು ಸ್ಟ್ರೆಚರ್ ನಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಸೆರೆಯಾಗಿತ್ತು. ಹೀಗಾಗಿ ಆಯಾ ಹೇಳಿದ ಟೈಂ ಸಿಸಿಟಿವಿ ಕ್ಯಾಮೆರಾದಲ್ಲಿರುವ ಟೈಂ ಒಂದೇ ಆಗಿದೆ. ದೃಶ್ಯದಲ್ಲಿ ರವಿ ನಾಯ್ಕ್ ಸೋದರತ್ತೆ ಸ್ಟ್ರೆಚರ್ ಕೊಡುತ್ತಿವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಪಘಾತವಾದ ಕಾರಿಗೆ ನಮ್ಗೂ ಸಂಬಂಧವಿಲ್ಲ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಅಶೋಕ್
Advertisement
ಸೀನ್ 3:
ಮಧ್ಯಾಹ್ನ 3 ಗಂಟೆ 51 ನಿಮಿಷಕ್ಕೆ ಹಳದಿ ಬಣ್ಣ ಶರ್ಟ್ ಧರಿಸಿದ್ದ ಡಾ. ಪೆರುಮಾಳ್ ಅವರು ಆಸ್ಪತ್ರೆಯಿಂದ ಹೊರಗೆ ಹೋಗಿದ್ದರು. ಆಕ್ಸಿಡೆಂಟ್ ಬಳಿಕ ಆರೋಪಿಗಳು ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆ ಒಳಗೆ ಬರಲೇ ಇಲ್ಲ. ಆಸ್ಪತ್ರೆ ಹೊರಗೆ ಹೋಗಿ ಡಾಕ್ಟರ್ ಚೆಕ್ ಮಾಡಿದ್ದರು. ಜೊತೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಡಾಕ್ಟರ್, ಸೀರಿಯಸ್ ಇದೆ. ಇಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದು ಗಾಯಾಳನ್ನು ನೋಡಿ ಹೇಳಿ ಕಳುಹಿಸಿದ್ದರು. ಇದಾದ ಬಳಿಕ ಒಂದು ನಿಮಿಷಕ್ಕೆ ಆಸ್ಪತ್ರೆ ಒಳಗೆ ಡಾಕ್ಟರ್ ವಾಪಸ್ ಆಗಿದ್ದರು. ಇದನ್ನೂ ಓದಿ: ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?
ಸೀನ್ 4, 5 ಹಾಗೂ 6:
ಮಧ್ಯಾಹ್ನ 3 ಗಂಟೆ 52 ನಿಮಿಷಕ್ಕೆ ಡಾ.ಪೆರುಮಾಳ್ ಅವರು ಆಸ್ಪತ್ರೆಯ ಒಳಗೆ ಬಂದರು. ಜೊತೆಗೆ ಆಯಾ ಭಾರತಿ ನಾಯ್ಕ್ ಅವರು ಮಧ್ಯಾಹ್ನ 3 ಗಂಟೆ 55 ನಿಮಿಷಕ್ಕೆ ಸ್ಟ್ರೆಚರ್ ಅನ್ನು ಆಸ್ಪತ್ರೆ ಒಳಗೆ ವಾಪಸ್ ತಂದರು. ಹೀಗಾಗಿ ಗಾಯಾಳುಗಳಿದ್ದ ವಾಹನ ಆಸ್ಪತ್ರೆಯಿಂದ ಹೊರಟು ಹೋಯಿತು.