ಬಳ್ಳಾರಿ: ಲಕ್ಷಾಂತರ ಮಂದಿ ಅಮಾಯಕರಿಂದ ಬರೋಬ್ಬರಿ 3 ಸಾವಿರ ಕೋಟಿ ರೂ. ಹಣವನ್ನು ಅಕ್ರಮವಾಗಿ ಸಂಗ್ರಹಿಸಿ ಜನರಿಗೆ ಮೋಸ ಮಾಡಿದ್ದ ಎಂಇಪಿ ಪಕ್ಷದ ಸಂಸ್ಥಾಪಕಿ ನೌಹೀರಾ ಶೇಖ್ ಳನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೀರಾ ಗೋಲ್ಡ್ ಕಂಪನಿಯ ನಿರ್ದೇಶಕಿ ನೌಹೀರಾ ಶೇಖ್ ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನರಿಗೆ 3,.000 ಕೋಟಿ ರೂಪಾಯಿಗಳ ವಂಚನೆ ಮಾಡಿರುವ ಆರೋಪದಲ್ಲಿ ಹೈದರಾಬಾದ್‍ನ ಚಂಚಲಗೂಡು ಜೈಲಿನಲ್ಲಿ ಇಷ್ಟು ದಿನ ನೌಹೀರಾಳನ್ನು ಇರಿಸಲಾಗಿತ್ತು. ಆದರೆ ಈಗ ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದು, ಕಾರಣಾಂತರಗಳಿಂದಾಗಿ ಯಾಕೆ ಹೈದರಾಬಾದ್ ಜೈಲಿನಿಂದ ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ? ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನು ಇರಿಸಲಾಗುತ್ತಾ? ಇಲ್ಲಾ ಬಳ್ಳಾರಿ ಜೈಲಿಗೆ ಆರೋಪಿಯನ್ನು ಕರೆದುಕೊಂಡು ಹೋಗಲಾಗುತ್ತಾ ಎಂಬ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿ ಇಟ್ಟಿದ್ದಾರೆ.
Advertisement
Advertisement
ಸುಮಾರು 24 ಬೇನಾಮಿ ಆಸ್ತಿ ಹಾಗೂ 182 ಬ್ಯಾಂಕ್ ಖಾತೆಯನ್ನು ಹೊಂದಿದ್ದ ನೌಹೀರಾ, 1,72,114 ಹೂಡಿಕೆದಾರರಿಂದ ಮೂರು ಸಾವಿರ ಕೋಟಿ ಹಣ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಳು. ಈ ವಂಚನೆ ಬೆಳಕಿಗೆ ಬಂದ ನಂತರ ನೌಹೀರಾಳನ್ನು ಬಂಧಿಸಲಾಗಿತ್ತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.