ಬಳ್ಳಾರಿ: ಸಂಗೀತಕ್ಕೆ ಮನಸೋಲದ ಮನಸ್ಸುಗಳೇ ಇಲ್ಲ ಎನ್ನುವ ಮಾತಿದೆ. ಈ ಮಾತು ಇದೀಗ ಮತ್ತೊಮ್ಮೆ ರುಜುವಾಗಿದೆ. ಏಕೆಂದರೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಸರಿಗಮಪದಲ್ಲಿ ತನ್ನ ಹಾಡಿನಿಂದಲೇ ಎಲ್ಲರ ಗಮನ ಸೆಳೆದಿರುವ ಋತ್ವಿಕ್ ಕಂಠಸಿರಿಗೆ ಕರಗಿರುವ ವೃದ್ಧರೊಬ್ಬರು, ತಮ್ಮ ಕಣ್ಣುಗಳನ್ನೆ ಗಾಯಕನಿಗೆ ದಾನ ಮಾಡಲು ಮುಂದಾಗಿದ್ದಾರೆ.
ಸರಿಗಮಪ ಕಾರ್ಯಕ್ರಮದಲ್ಲಿ ಕಣ್ಣುಗಳು ಇಲ್ಲದಿದ್ದರೂ ತಮ್ಮ ಕಂಠಸಿರಿಯಿಂದಲೇ ಎಲ್ಲರ ಕಣ್ಮನ ಸೆಳೆದಿರುವ ಗಾಯಕ ಋತ್ವಿಕ್ ಗೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 74 ವರ್ಷದ ವೃದ್ಧ ಸಿದ್ದಲಿಂಗನಗೌಡ ಕಣ್ಣುಗಳನ್ನು ದಾನ ಮಾಡಲು ಮುಂದೆ ಬಂದಿದ್ದಾರೆ.
Advertisement
Advertisement
ದೃಷ್ಟಿ ವಿಕಲ ಚೇತನರಾಗಿದ್ದರೂ ತಮ್ಮ ಅದ್ಭುತ ಕಂಠಸಿರಿಯಿಂದಲೇ ಅಪಾರ ಅಭಿಮಾನಿಗಳನ್ನು ಋತ್ವಿಕ್ ಗಳಿಸಿದ್ದಾರೆ. ಹಾಡುಗಳನ್ನು ಕೇಳುತ್ತಾ ಅವರ ಅಭಿಮಾನಿಯಾದ ಕೊಟ್ಟೂರಿನ ಸಿದ್ದಲಿಂಗನಗೌಡ ಕಣ್ಣುಗಳನ್ನ ದಾನ ಮಾಡಲು ಹಠ ಹಿಡಿದಿದ್ದಾರೆ. ಅದಕ್ಕಾಗಿ ಸಿದ್ದಲಿಂಗನಗೌಡ ಸಿಕ್ಕ ಸಿಕ್ಕವರಲ್ಲಿ ತನ್ನ ಕಣ್ಣು ದಾನದ ಆಸೆ ಹೊರಹಾಕುತ್ತಿದ್ದಾರೆ.
Advertisement
ಸಾಯುವ ಮುನ್ನ ಶ್ರೇಷ್ಠವಾದ ಕೆಲಸ ಮಾಡು ಎಂದು ನಮ್ಮ ಅಪ್ಪ ಹೇಳಿದ್ದಾರೆ. ಅದರಂತೆ ನಾನು ಅಂಧ ಹಾಡುಗಾರ ಋತ್ವಿಕ್ ಗೆ ಕಣ್ಣುದಾನ ಮಾಡಲು ಸಿದ್ಧನಾಗಿದ್ದೇನೆ. ಒಂದು ತಿಂಗಳ ಹಿಂದೆ ನನ್ನ ದೇಹ, ಕಣ್ಣುಗಳನ್ನ ಬಳ್ಳಾರಿ ಸರ್ಕರಿ ಆಸ್ಪತ್ರೆಗೆ ಬರೆದುಕೊಟ್ಟಿದ್ದೇನೆ. ನನ್ನ ಸಾವಿನ ನಂತರ ನನ್ನ ಕಣ್ಣುಗಳನ್ನು ಋತ್ವಿಕ್ಗೆ ಅಳವಡಿಸಬಹುದು ಎಂದು ಮನವಿ ಮಾಡಬೇಕು ಅಂತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv