ಬಳ್ಳಾರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೋದಿಯವರನ್ನು ಸೋಲಿಸಲು ತೃತೀಯ ರಂಗ ಒಂದಾಗಿದೆ ಎಂದು ಬಳ್ಳಾರಿ ಶಾಸಕ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭದಲ್ಲಿ ಬಹಳಷ್ಟು ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು, ತೃತೀಯ ರಂಗದ ನಾಯಕರು ಕಾರ್ಯಕ್ರದಲ್ಲಿ ಭಾಗಿಯಾಗಿದ್ದಾರೆ. ತೃತೀಯ ರಂಗದ ಒಗ್ಗಟ್ಟು ಕಾಂಗ್ರೆಸ್ ಪತನದ ಮೊದಲು ಮೆಟ್ಟಿಲಾಗಿದೆ. ಈ ತೃತೀಯ ರಂಗದ ಒಗ್ಗಟ್ಟೂ ಮಳೆಗಾಲದ ಅಣಬೆಗಳು ಇದ್ದಂತೆ ಲೇವಡಿ ಮಾಡಿದರು.
Advertisement
ಮೋದಿಯವರನ್ನು ಸೋಲಿಸಲು ತೃತೀಯ ರಂಗ ಒಂದಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ತೃತೀಯ ರಂಗ ಅಣಬೆ ತರಹ ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಚುನಾವಣೆ ಮುಗಿದ ನಂತರ ಅವು ಯಾವುದು ಇರಲ್ಲ. ಯಾವುದೇ ಇತಿಹಾಸವನ್ನು ತೆಗೆದು ನೋಡಿದರೂ ತೃತಿಯ ರಂಗ ಉಳಿದಿರುವುದಿಲ್ಲ ಅದನ್ನು ನಾವು ನೋಡಬಹುದು. ಚುನಾವಣೆ ಮುಗಿದ ನಂತರ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋಗಿರುತ್ತಾರೆ. ಈ ತೃತಿಯ ರಂಗಕ್ಕೆ ಆಯಸ್ಸು ಇರಲ್ಲ ಎಂದು ಅಭಿಪ್ರಾಯಪಟ್ಟರು.
Advertisement
ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಯೂ ಟರ್ನ್ ಹೊಡೆಯುತ್ತಿದ್ದಾರೆ. ರೈತರ ಸಾಲ ಮಾಡಲೇಬೇಕು ಆದರೆ ಸಾಲ ಮನ್ನಾ ಮಾಡೋದಿಲ್ಲ ಅಂತಾ ಹೇಳುತ್ತಿದ್ದಾರೆ. ಬಹುಮತ ಸಾಬೀತು ಪಡಿಸುವ ದಿನದಂದು ಭಾಗಿಯಾಗುವ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳಿದಂತೆ ಕೇಳುತ್ತೇವೆ ಎಂದರು.
Advertisement