ಬಳ್ಳಾರಿ: ಬಿಜೆಪಿಯ ಅಭ್ಯರ್ಥಿಗಳ ಪರ ನಟ ಸುದೀಪ್ ಪ್ರಚಾರ ನಡೆಸಿರುವ ಕುರಿತು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಕಿಡಿಕಾರಿದ್ದಾರೆ.
ಜಿಲ್ಲೆಯ ಹಲಕುಂದಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಸಿನಿಮಾ ನಟರು ಪದರೆಗೆ ಮಾತ್ರ ಸೀಮಿತ. ಸುದೀಪ್ ರೀಲ್ ಸ್ಟಾರ್, ನಾವೆಲ್ಲಾ ರಿಯಲ್ ಸ್ಟಾರ್. ರೀಲ್ ಸ್ಟಾರ್ ನೋಡಿ ಜನ ಮತ ಹಾಕಲ್ಲ. ಜನರ ಮಧ್ಯೆ ಇರುವ ನಾವೂ ನಿಜವಾಗಿ ರಿಯಲ್ ಸ್ಟಾರ್ ಎಂದು ಹೇಳಿದರು.
ಸಿನಿಮಾ ನಟರು ಬಂದ ಕೂಡಲೇ ಜನ ಮತ ಹಾಕಲ್ಲ. ಮತದಾರರು ತುಂಬಾ ಪ್ರಬುದ್ಧರಿದ್ದಾರೆ. ಸುದೀಪ್ ಅವರಿಗೆ ಜಾತಿ ಮೇಲೆ ಅಭಿಮಾನ ಇದ್ದರೇ ಅವರು ನನ್ನ ಪರವಾಗಿಯೂ ಪ್ರಚಾರ ಮಾಡಬೇಕಿತ್ತು. ಆದರೆ ಸುದೀಪ್ ಸಿಎಂ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡದೇ ರಾಮುಲು ಪರವಾಗಿ ಪ್ರಚಾರ ಮಾಡಿದ್ದು ಸರಿಯಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಿಎಂ ಪರ ಪ್ರಚಾರ ಮಾಡಬೇಕಿತ್ತು ಎಂದು ಹೇಳಿ ನಾಗೇಂದ್ರ ಕಿಡಿಕಾರಿದರು.
ಬಳ್ಳಾರಿಯ ಶ್ರೀರಾಮುಲು ಹಾಗೂ ಸೋಮಶೇಖರ್ ಪರ ನಟ ಸುದೀಪ್ ಸೋಮವಾರ ಪ್ರಚಾರ ನಡೆಸಿ ರೋಡ್ ಶೋ ನಡೆಸಿದ್ದರು. ಹಲವು ಜನರು ಸುದೀಪ್ ರನ್ನು ನೋಡಲು ಬಿಸಿಲನ್ನು ಲೆಕ್ಕಿಸದೆ ಕಾದು ನಿಂತಿದ್ದರು.