ಆನಂದ್‍ಸಿಂಗ್ ಜೊತೆ ರಾಜಿಗೆ ಕಂಪ್ಲಿ ಗಣೇಶ್ ಕಸರತ್ತು!

Public TV
1 Min Read
Ganesh Anand Singh

ಬಳ್ಳಾರಿ: ಮೂರು ತಿಂಗಳ ಹಿಂದೆ ಬಿಡದಿ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಗಣೇಶ್ ಈಗ ರಾಜಿ ಪಂಚಾಯ್ತಿಗೆ ಮುಂದಾಗಿದ್ದಾರೆ.

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಆನಂದ್ ಸಿಂಗ್ ಭೇಟಿ ಮಾಡಿ ತಪ್ಪಾಯ್ತು ಕ್ಷಮಿಸಿಬಿಡಿ, ಇನ್ಮುಂದೆ ನಿಮ್ಮ ತಂಟೆಗೆ ಬರಲ್ಲ ಎಂದು ಕ್ಷಮೆ ಕೇಳಿದ್ದಾರೆ. ಸುಮಾರು 1 ಗಂಟೆಗಳ ಕಾಲ ಆನಂದ್ ಸಿಂಗ್ ಜೊತೆ ಚರ್ಚೆ ನಡೆಸಿದ ಗಣೇಶ್ ಇನ್ಮುಂದೆ ಆನಂದ್ ಸಿಂಗ್ ಮಾರ್ಗದರ್ಶನದಲ್ಲೇ ನಡೆಯೋದಾಗಿ ಹೇಳಿದ್ದಾರೆ.

ಹೊಸಪೇಟೆಯಲ್ಲಿ ವಾಲ್ಮೀಕಿ ಸಮುದಾಯ ಹಾಗೂ ಸಿಂಗ್ ಕುಟುಂಬದವರು ಸಹಬಾಳ್ವೆಯಿಂದ ಇರಲು ಆನಂದ್ ಸಿಂಗ್ ಈ ಸಂಧಾನಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ. ಆದರೆ ರೌಡಿ ಎಂಎಲ್‍ಎ ಗಣೇಶ್‍ರನ್ನು ಶಾಸಕ ಆನಂದ್ ಸಿಂಗ್ ಕ್ಷಮಿಸಿದ್ರೂ, ಪತ್ನಿ ಹಾಗೂ ಕುಟುಂಬ ಸದಸ್ಯರು ಕ್ಷಮಿಸೋದಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ.

anand singh GANESH

ಇತ್ತ ಜೈಲಿನಿಂದ ರಿಲೀಸ್ ಆಗಿರುವ ಕಂಪ್ಲಿ ಶಾಸಕ ಜೆ ಎನ್ ಗಣೇಶ್, ಬಳ್ಳಾರಿ ರಾಜಕೀಯದಲ್ಲಿ ಮತ್ತೆ ಬ್ಯುಸಿ ಆಗಿದ್ದಾರೆ. ನನ್ನ ಮತ್ತು ಆನಂದ್ ಸಿಂಗ್ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮ ನಡುವೆ ಯಾವುದೋ ಶಕ್ತಿ ಕೆಲಸ ಮಾಡಿದೆ ಎಂದು ಹೇಳಿದ್ದರು.

ಜೈಲಿಂದ ಹೊರಬಂದ ಬಳಿಕ ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿಯನ್ನ ಭೇಟಿ ಮಾಡಿದ್ದರು. ತಂದೆ ಸಮಾನರಾದ, ನನ್ನ ರಾಜಕೀಯ ಗುರು ಸೂರ್ಯನಾರಾಯಣ ರೆಡ್ಡಿಯವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಉಪಚುನಾವಣೆಯಲ್ಲಿ ಉಗ್ರಪ್ಪ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದೇವೆ. ಚುನಾವಣೆಯ ಮುನ್ನ ಇದ್ದ ಸ್ಥಿತಿ ಬೇರೆ, ಎರಡು ದಿನಗಳಿದ್ದಂತೆ ಚುನಾವಣೆ ಪರಿಸ್ಥಿತಿ ಬೇರೆ ಇತ್ತು ಎಂದು ಗಣೇಶ್ ಹೇಳಿದ್ದರು.

ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಅವರು, ಈ ಹಲ್ಲೆ ಅಚಾನಕ್ ಆಗಿ ನಡೆದ ಘಟನೆ ಆಗಿದೆ. ಆನಂದ್ ಸಿಂಗ್ ಹಾಗೂ ಗಣೇಶ್ ಇಬ್ಬರನ್ನೂ ಸಂಧಾನ ಮಾಡಲಾಗುತ್ತೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *