– 10 ಎಕ್ರೆ ಜಮೀನಿನಲ್ಲಿ ಇಸ್ರೇಲ್ ಮಾದರಿ ಕೃಷಿ
ಬಳ್ಳಾರಿ: ಇಂದು ಪ್ರೇಮಿಗಳ ದಿನಾಚರಣೆ. ಪ್ರೇಮಿಗಳ ಪ್ರೀತಿಗೆ ಗುಲಾಬಿ ಹೂವೇ ಆಧಾರ. ಹೀಗಾಗಿಯೇ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಗಾಗಿ ಕೆಂಗುಲಾಬಿ ಬಳಸುತ್ತಾರೆ. ವಾಲೆಂಟೈನ್ಸ್ ಡೇ ಬಂದ್ರೆ ಸಾಕು ಎಷ್ಟೇ ದುಬಾರಿಯಾದ್ರೂ ಲವರ್ಸ್‍ಗಳು ಗುಲಾಬಿಗಾಗಿ ಹುಡುಕಾಟ ಮಾಡುತ್ತಾರೆ. ಇತಂಹ ಪ್ರೀತಿಯ ಗುಲಾಬಿ ಹೂವಿಗೆ ದೇಶ ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ಆದ್ರೆ ದೇಶದ ಗಡಿಯಾಚೆಗೂ ಗಣಿ ನಾಡಿನ ಗುಲಾಬಿ ಹೂವಿಗೆ ಭಾರೀ ಬೇಡಿಕೆ ಬಂದಿದೆ.
ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಇಂದು ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಗಾಗಿ ಗುಲಾಬಿ ಹೂ ಕೊಟ್ಟು ಪ್ರಪ್ರೋಸ್ ಮಾಡುತ್ತಾರೆ. ಹೀಗಾಗಿ ಇಂದು ಗುಲಾಬಿ ಹೂವಿಗೆ ಎಷ್ಟೇ ಬೆಲೆಯಾದ್ರೂ ಲವರ್ಸ್ ಖರೀದಿ ಮಾಡ್ತಾರೆ. ಅದರಲ್ಲೂ ಪಾಶ್ಚಿಮಾತ್ಯ ದೇಶಗಳಲ್ಲಿ ಗುಲಾಬಿ ಹೂಗೆ ಭಾರೀ ಬೇಡಿಕೆಯಿದೆ. ಹೀಗೆ ಸಾಕಷ್ಟು ಬೇಡಿಕೆಯಿರೋ ಗುಲಾಬಿ ಹೂವುಗಳನ್ನ ಗಣಿನಾಡಿನ ರೈತರೊಬ್ಬರು ದೇಶದ ಗಡಿಯಾಚೆಗೂ ರಫ್ತು ಮಾಡುತ್ತಿದ್ದಾರೆ. ಕೂಡ್ಲಗಿ ತಾಲೂಕಿನ ಸಿದ್ದಾಪುರ ತಾಂಡಾದ ಗೀರೀಶ ರಾಮಸ್ವಾಮಿ ಕಳೆದ 2 ವರ್ಷಗಳಿಂದ ಅತ್ಯುತ್ತಮ ಗುಣಮಟ್ಟದ ಗುಲಾಬಿ ಹೂವಗಳನ್ನ ಬೆಳೆದು ದೇಶ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದಾರೆ.
Advertisement
Advertisement
ಎಂಟೆಕ್ ಓದಿ ಜರ್ಮನ್ ದೇಶದ ಆಟೋಮೊಬೈಲ್ ಕಂಪನಿಯೊಂದರಲ್ಲಿ 4 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಗಿರೀಶ್, ತನ್ನ ನೌಕರಿಗೆ ಗುಡ್ ಬೈ ಹೇಳಿ ಇದೀಗ ಗುಲಾಬಿ ಬೆಳೆ ಬೆಳೆಯುತ್ತಿದ್ದಾರೆ. ವಿದೇಶಗಳಲ್ಲಿ ಹೂವುಗಳಿಗೆ ಭಾರೀ ಬೇಡಿಕೆಯಿರುವುದನ್ನ ಮನಗಂಡ ಗಿರೀಶ್ ಇದೀಗ ತಮ್ಮ ಹತ್ತು ಎಕರೆ ಜಮೀನನಲ್ಲಿ 7 ಪಾಲಿಹೌಸ್‍ಗಳನ್ನ ನಿರ್ಮಿಸಿ ಇಸ್ರೇಲ್ ಮಾದರಿಯ ಕೃಷಿ ಪ್ರಕಾರ ಕಡಿಮೆ ನೀರು ಬಳಸಿಕೊಂಡು ಅತ್ಯುತ್ತಮ ಗುಣಮಟ್ಟದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ.
Advertisement
ಕಳೆದ ಒಂದೂವರೆ ವರ್ಷದಿಂದ ಬೆಳೆಯುತ್ತಿರುವ ಹೂವುಗಳಿಗೆ ಇದೀಗ ಎಲ್ಲಿಲ್ಲದ ಬೇಡಿಕೆಯಿದೆ. ಅಲ್ಲದೆ ವ್ಯಾಲೆಂಟೈನ್ಸ್ ಡೇಗಾಗಿ ರಫ್ತು ಮಾಡುತ್ತಿರುವ ಗುಲಾಬಿಯೊಂದಕ್ಕೆ 20 ರೂಪಾಯಿ ಬೆಲೆ ಬಂದಿರುವುದು ವಿಶೇಷವಾಗಿದೆ ಎಂದು ಗಿರೀಶ್ ತಂದೆ ರಾಮಸ್ವಾಮಿ ಹೇಳುತ್ತಾರೆ.
Advertisement
ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಗಿರೀಶ್ ದೇಶ-ವಿದೇಶದ ಹಲವು ಭಾಗಗಳಿಗೆ ತಮ್ಮ ಗುಲಾಬಿ ಹೂವುಗಳನ್ನ ರಫ್ತು ಮಾಡಿದ್ದಾರೆ. ಅಲ್ಲದೆ ಬರದ ನಾಡಿನಲ್ಲಿ ಕಡಿಮೆ ನೀರು ಬಳಸಿಕೊಂಡು ಭರ್ಜರಿ ಬೆಳೆ ಬೆಳೆಯುವ ಮೂಲಕ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ಒಟ್ಟಿನಲ್ಲಿ ವ್ಯಾಲೆಂಟೈನ್ಸ್ ಡೇಯಂದು ಗಣಿ ನಾಡಿನ ಗುಲಾಬಿ ಹೂವುಗಳಿಗೆ ಗಡಿಯಾಚೆಗೂ ಭಾರೀ ಬೇಡಿಕೆ ಬಂದಿರುವುದು ನಿಜಕ್ಕೂ ವಿಶೇಷವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv