ಬಳ್ಳಾರಿ: ನಾವು ಜಗಳ ಆಡಿರೋದು ಒಂದು ಕೆಟ್ಟ ಗಳಿಗೆ ಆನಂದ್ ಸಿಂಗ್ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊಸಪೇಟೆಯನ್ನು ಹೊಸ ಜಿಲ್ಲೆಯಾಗಿ ಮಾಡಬೇಕು ಎಂದು ಹೊರಟಿರುವ ಅನರ್ಹ ಶಾಸಕ ಆನಂದ್ ಸಿಂಗ್‍ಗೆ ಬೆಂಬಲ ನೀಡುವುದಾಗಿ ಹೇಳಿದರು. ಇದರ ಜೊತೆಗೆ ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಂಪ್ಲಿ ಕೂಡ ಹೊಸಪೇಟೆಗೆ ಸೇರಿಸಲು ಮನವಿ ಮಾಡುತ್ತೆವೆ. ಹೊಸಪೇಟೆ ಜಿಲ್ಲೆಯಾದರೇ ಕಂಪ್ಲಿ ಹೊಸಪೇಟೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳುವ ಮೂಲಕ ಆನಂದ್ ಸಿಂಗ್ ನಿಯೋಗದಲ್ಲಿ ನಾನು ಕೂಡ ಇರುತ್ತೇನೆ ಎಂದು ಹೇಳಿದರು. ಇಂದು ಅನಂದ್ ಸಿಂಗ್ ನೇತೃತ್ವದ ನಿಯೋಗ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಹೊಸಪೇಟೆಯನ್ನು ಜಿಲ್ಲೆ ಮಾಡಲು ಮನವಿ ಸಲ್ಲಿಸಲಿದ್ದಾರೆ.