ಬಳ್ಳಾರಿ: ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ದ ಸಂಘರ್ಷದಿಂದಾಗಿ ಬಳ್ಳಾರಿ (Ballary) ಜೀನ್ಸ್ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ.
ಜೀನ್ಸ್ ಉದ್ಯಮಕ್ಕೆ ಸರಬರಾಜಾಗ್ತಿದ್ದ ಕೆಮಿಕಲ್ಸ್ ಬರುವುದು ಸ್ಥಗಿತವಾಗಿದೆ. ಹೀಗಾಗಿ ಕೆಮಿಕಲ್ ಸರಬರಾಜು ಸ್ಥಗಿತದಿಂದ ಜೀನ್ಸ್ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಉತ್ಪಾದನೆ ಕುಸಿತವಾಗಿದ್ದು, 20 ಲಕ್ಷ ಪ್ಯಾಂಟ್‌ಗಳ ರಫ್ತು ಸ್ಥಗಿತವಾಗಿದೆ. ಇದನ್ನೂ ಓದಿ: ಸಾಂಗ್ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
ಯುಗಾದಿ ಹಾಗೂ ರಂಜಾನ್‌ಗೆ ಗಲ್ಪ್ ರಾಷ್ಟಗಳಿಗೆ ಬಳ್ಳಾರಿಯ ಜೀನ್ಸ್ ಪ್ರಾಡಕ್ಟ್ಗಳು ರಫ್ತಾಗುತ್ತಿತ್ತು. ಪ್ರಮುಖವಾಗಿ ರಂಜಾನ್‌ನಲ್ಲಿ 20 ಲಕ್ಷ ಜೀನ್ಸ್ ಪ್ಯಾಂಟ್‌ಗಳು ಕೊಲ್ಲಿ ರಾಷ್ಟಗಳಿಗೆ ರಫ್ತಾಗುತ್ತಿತ್ತು. ಇದೀಗ ಜೀನ್ಸ್ಗೆ ಲೇಪನದ ಕಲರ್ ಕೊರತೆ ಉಂಟಾಗಿದೆ. ಜೀನ್ಸ್ ಕೆಮಿಕಲ್ಸ್ ಕೊರತೆಯಿಂದಾಗಿ ಶೇ.50ರಷ್ಟು ಜೀನ್ಸ್ ಉತ್ಪಾದನೆ ಕುಸಿತವಾಗಿದೆ. ಇನ್ನೂ 40 ರೂ. ಞg ಗೆ ಸಿಗ್ತಿದ್ದ ಕೆಮಿಕಲ್ಸ್ ಇದೀಗ 150 ರೂ. ಗಡಿ ದಾಟಿದ್ದು, ಮತ್ತೊಂದು ಹೊಡೆತ ಬಿದ್ದಂತಾಗಿದೆ.
ಪ್ರಮುಖವಾಗಿ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್ಸ್, ಪೊಟ್ಯಾಸಿಯಮ್ ಪರ್ಮಾಂಗನೇಟ್ ಕೆಮಿಕಲ್ಸ್ ಸರಬರಾಜು ಸ್ಥಗಿತವಾಗಿರೋದ್ರಿಂದ ಹಬ್ಬದ ಸೀಸನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿ, ಜೀನ್ಸ್ ಉದ್ಯಮ ನಲುಗುತ್ತಿದೆ.ಇದನ್ನೂ ಓದಿ: KPSC Row| ಒಂದೇ ಕೊಠಡಿಯಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಪಾಸ್ – ವಿವಾದಕ್ಕೆ ಉತ್ತರ ಕೊಟ್ಟ ಕೃಷ್ಣಬೈರೇಗೌಡ

