ಬಳ್ಳಾರಿ: ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಕೊಂದ ಪತಿ ರಾತ್ರಿ ಪೂರ್ತಿ ಪತ್ನಿಯ ಶವದ ಪಕ್ಕವೇ ಮಲಗಿದ್ದ ಘಟನೆ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ.
ಕೊಲೆ ಮಾಡಿದ ಪತಿಯನ್ನು ವ್ಯಾಚ್ಯಾ ನಾಯ್ಕ್ ಎಂದು ಗುರುತಿಸಲಾಗಿದೆ. ತಡರಾತ್ರಿ ತನ್ನ ಪತ್ನಿ 40 ವರ್ಷದ ಜ್ಯೋತಿ ಬಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ನಾಯ್ಕ್ ರಾತ್ರಿ ಪೂರ್ತಿ ತನ್ನ ಹೆಂಡತಿಯ ಶವದ ಪಕ್ಕವೇ ಮಲಗಿದ್ದಾನೆ.
ಕೊಲೆಯಾದ ಮಹಿಳೆ ಕೂಲಿ ಕೆಲಸ ಮಾಡುತ್ತಿದ್ದು, ವ್ಯಾಚ್ಯಾ ನಾಯ್ಕ್ ಕೂಡ ಕೂಲಿ ಕೆಲಸ ಮಾಡುತ್ತಿದ್ದ. ಆದರೆ ಪ್ರತಿ ದಿನ ರಾತ್ರಿ ಕುಡಿದು ಬಂದು ಜಗಳವಾಡುತ್ತಿದ್ದ ನಾಯ್ಕ್, ತಡ ರಾತ್ರಿ ತನಗೆ ಅರಿವೇ ಇಲ್ಲದ ರೀತಿಯಲ್ಲಿ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿ ಮೃತ ದೇಹದ ಪಕ್ಕವೇ ರಾತ್ರಿ ಪೂರ್ತಿ ಮಲಗಿದ್ದಾನೆ. ಈ ಸಂಬಂಧ ಹಿರೇ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.