ಬಳ್ಳಾರಿ: ಕಳೆದ ಹತ್ತು ವರ್ಷಗಳ ಬಳಿಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಗಣಿ ನಾಡು ಬಳ್ಳಾರಿಗೆ ಆಗಮಿಸಿದ್ದಾರೆ. ಬಳ್ಳಾರಿಗೆ ಬಂದ ಖುಷಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬ ಸಮೇತರಾಗಿರುವ ಪೋಟೋ ಪೋಸ್ಟ್ ಮಾಡಿ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ. ಹತ್ತು ವರ್ಷ ಬಳಿಕ ಹುಟ್ಟೂರಿಗೆ ಬಂದಿದ್ದೇನೆ, ಬಳ್ಳಾರಿ ನಿವಾಸದಲ್ಲಿ ನನ್ನ ಕುಟುಂಬಸ್ಥರೊಂದಿಗೆ ವರ ಮಹಾಲಕ್ಷ್ಮಿ ಹಬ್ಬದಲ್ಲಿ ಭಾಗಿಯಾಗಿರುವೆ ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಳ್ಳಾರಿಗೆ ಗೌಪ್ಯವಾಗಿ ಎಂಟ್ರಿ ಕೊಟ್ರು ಜನಾರ್ದನ ರೆಡ್ಡಿ – ಕುಟುಂಬಸ್ಥರ ಜೊತೆ ವರಮಹಾಲಕ್ಷ್ಮಿ ಹಬ್ಬ ಆಚರಣೆ
ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿ ಜಾಮೀನು ಪಡೆದರು ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಬರುವ ಭಾಗ್ಯ ಮಾತ್ರ ದೊರೆತಿರಲಿಲ್ಲ. ಆದರೆ ಈಗ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಷರತ್ತು ಬದ್ಧ ಜಾಮೀನಿನ ಷರತ್ತುಗಳನ್ನು ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ 10 ವರ್ಷಗಳ ಬಳಿಕ ರೆಡ್ಡಿ ಅವರು ಹುಟ್ಟೂರಿಗೆ ಬರುವಂತಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂತೋಷದ ಕ್ಷಣಗಳನ್ನು ರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
View this post on Instagram