ಬಳ್ಳಾರಿ: ಸದಾ ಕಾಲ ಸಾಫ್ಟ್, ಕೂಲ್ ಕೂಲ್ ಆಗಿರೋ ರಾಜ್ಯ ಸಚಿವರೊಬ್ಬರು ಇದೀಗ ಪುಲ್ ವೈಲೆಂಟ್ ಆಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಅಧ್ಯಕ್ಷನ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಅಧಿಕಾರದ ದರ್ಪ ಮೆರೆದಿದ್ದಾರೆ. ಅಷ್ಟೇ ಅಲ್ಲ ಸಚಿವರ ಪತ್ನಿಯ ಸೋದರನ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಆರೋಪಿಯನ್ನ ಬಂಧಿಸದ ಡಿವೈಎಸ್ ಪಿಗೆ ಇದೀಗ ಎತ್ತಂಗಡಿ ಶಿಕ್ಷೆ ನೀಡುತ್ತಾ ಇದ್ದಾರೆ.
Advertisement
ಹೌದು. ಸಂಡೂರು ಶಾಸಕ ತುಕಾರಾಂ ಅವರು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿದ್ದಾರೆ. ಇವರು ತುಂಬಾ ಸಾಫ್ಟ್ ಎಂದು ಎಲ್ಲಾ ಮಾತಾಡುತ್ತಾರೆ. ಆದರೆ ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲೋ ಭೀತಿಯಿಂದ ಫುಲ್ ವೈಲೆಂಟ್ ಆಗಿದ್ದಾರೆ. ಬಿಜೆಪಿ ಪಾಳಯವನ್ನ ಕಟ್ಟಿಹಾಕಲು ಸಚಿವರು ಸೇಡಿನ ರಾಜಕೀಯಕ್ಕೆ ಇಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ತನ್ನ ಬಾಮೈದನಿಗೆ ಜಾತಿ ನಿಂದನೆ ಮಾಡಿದ ಆರೋಪದಡಿ ಸಂಡೂರು ತಾಲೂಕು ಬಿಜೆಪಿ ಅಧ್ಯಕ್ಷ ಜಿಟಿ ಪಂಪಾಪತಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.
Advertisement
Advertisement
ಸಂಡೂರು ಪುರಸಭೆಗೆ ಇದೇ ಬುಧವಾರದಂದು ಚುನಾವಣೆ ನಡೆಯಲಿದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗಿಯಾಗಬಾರದೆಂದು ಪಂಪಾಪತಿ ವಿರುದ್ಧ ಸಚಿವರು ಅಟ್ರಾಸಿಟಿ ಕೇಸ್ ಆಟ ಆಡಿದ್ದಾರೆ. ಪಂಪಾಪತಿ ವಿರುದ್ಧ ಪತ್ನಿಯ ಸಹೋದರ ವಿಶ್ವನಾಥ್ ಮಾಳಗಿಯಿಂದ ಜಾತಿನಿಂದನೆ ಪ್ರಕರಣ ದಾಖಲಿಸಿ, ಬಂಧನಕ್ಕೆ ಕೂಡ್ಲಿಗಿ ಡಿವೈಎಸ್ಪಿ ನೇತೃತ್ವದಲ್ಲಿ ನೂರೈವತ್ತಕ್ಕೂ ಹೆಚ್ಚು ಪೊಲೀಸರನ್ನ ಕಳುಹಿಸಿದ್ದಾರೆ. ಆದರೆ ಬಿಜೆಪಿ ಅಧ್ಯಕ್ಷ ಪೊಲೀಸರ ಕೈಗೆ ಸಿಗದೆ ಕೊನೆಕ್ಷಣದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಕೊನೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ತುಕಾರಾಂ ಕೂಡ್ಲಿಗಿ ಡಿವೈಎಸ್‍ಪಿಗೆ ಎತ್ತಂಗಡಿ ಭಾಗ್ಯ ಕರುಣಿಸಿದ್ದಾರೆ.
Advertisement
ತುಕಾರಾಂ ಸೇಡಿನ ರಾಜಕೀಯಕ್ಕೆ ಸಂಡೂರಿನೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಪೊಲೀಸರು ಸಚಿವರ ಒತ್ತಡಕ್ಕೆ ಮಣಿಯದಂತೆ ಸ್ವತಃ ಮಾಜಿ ಸಿಎಂ ಯಡಿಯೂರಪ್ಪ ಬಳ್ಳಾರಿ ಎಸ್‍ಪಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಚಿವರ ಸೋಲಿನ ಭೀತಿಯಲ್ಲಿ ಹೀಗೆಲ್ಲಾ ಮಾಡುತ್ತಿರೋದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.