– ವಿಶೇಷ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿಗೆ ಶ್ಲಾಘನೆ
ಬಳ್ಳಾರಿ: ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೆ ಬಿಸಿಲಿನ ತಾಪ ಬಲುಜೋರಾಗಿದೆ. ಚುನಾವಣಾ ಸಿಬ್ಬಂದಿ ಸಾಕಪ್ಪ ಸಾಕು ಈ ಬಿಸಿಲು ಎಂದಿದ್ದಾರೆ. ಹೀಗಾಗಿಯೇ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಸಿಬ್ಬಂದಿಗೆ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಮಾಡಿದೆ.
ಈಗ ಎಲ್ಲೆಡೆ ದಿನೇ ದಿನೇ ಚುನಾವಣೆ ಬಿಸಿ ಏರುತ್ತಿದೆ. ಆದ್ರೆ ಬಳ್ಳಾರಿಯಲ್ಲಿ ಮಾತ್ರ ಚುನಾವಣಾ ಬಿಸಿಗಿಂತಲೂ ಬಿಸಿಲಿನ ಬಿಸಿ ಜೋರಾಗುತ್ತಿದೆ. ಬಿಸಿಲಿನ ಬೇಗೆಗೆ ಹಗಲಿರುಳು ಕೆಲಸ ಮಾಡೋ ಚುನಾವಣಾ ಸಿಬ್ಬಂದಿ ಹೈರಾಣಾಗಿ ಹೋಗಿದ್ದಾರೆ. ಸೂರ್ಯನ ಪ್ರಪಾತ ಕಂಡು ಸಾಕಪ್ಪ ಸಾಕು ಈ ಬಿಸಿಲು ಬೇಗೆ ಅಂತಿದ್ದಾರೆ. ಆದ್ರೆ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಚುನಾವಣಾ ಸಿಬ್ಬಂದಿಗೆ ಬಳ್ಳಾರಿ ಜಿಲ್ಲಾಡಳಿತ ಎಲ್ಲ ಚೆಕ್‍ಪೊಸ್ಟ್ ಗಳಿಗೆ ಏರ್ ಕೂಲರ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಿಬ್ಬಂದಿಯ ನೆರವಿಗೆ ಧಾವಿಸಿದೆ ಎಂದು ಕರ್ತವ್ಯ ನಿರತ ಪೊಲೀಸ್ ಪೇದೆ ಮುದುಕಯ್ಯ ತಿಳಿಸಿದ್ದಾರೆ.
Advertisement
Advertisement
ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 40 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪವಿದೆ. ಹಗಲು ಹೊತ್ತಿನಲ್ಲಿ ಹೊರಬರಲಾಗದಷ್ಟು ಬಿಸಿಲಿನ ಬೇಗೆ ಹೆಚ್ಚಳವಾಗಿರುವುದರಿಂದ ಚೆಕ್‍ಪೊಸ್ಟ್ ಗಳಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಹೈರಣಾಗಿ ಹೋಗಿದ್ದಾರೆ. ಹೀಗಾಗಿ ಬಳ್ಳಾರಿ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ವಿಶೇಷ ಕಾಳಜಿ ತೆಗೆದುಕೊಳ್ಳುವ ಮೂಲಕ ಎಲ್ಲ ಚೆಕ್‍ಪೊಸ್ಟ್ ಗಳಿಗೆ ಏರ್ ಕೂಲರ್ ಹಾಗೂ ತಣ್ಣೀರಿನ ಗಡಿಗೆಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಜಿಲ್ಲಾಡಳಿತದ ಈ ವ್ಯವಸ್ಥೆಯಿಂದ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಅನೂಕೂಲವಾಗಿದೆ ಎಂದು ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ರಾಜಶೇಖರ್ ಹೇಳುತ್ತಾರೆ.
Advertisement
Advertisement
ಹಗಲು ರಾತ್ರಿಯೆನ್ನದೆ ಚೆಕ್‍ಪೊಸ್ಟ್ ಗಳಲ್ಲಿ ಕರ್ತವ್ಯನಿರ್ವಹಿಸುವ ಸಿಬ್ಬಂದಿಗೆ ಜಿಲ್ಲಾಡಳಿತ ಏರ್ ಕೂಲರ್ ವ್ಯವಸ್ಥೆ ಮಾಡಿರುವುದರಿಂದ ಸಿಬ್ಬಂದಿಗೆ ಖುಷಿ ತಂದಿದೆ. ಹೀಗಾಗಿ ಬಳ್ಳಾರಿ ಜಿಲ್ಲಾಡಳಿತದ ಈ ಕಾರ್ಯಕ್ಕೆ ಚುನಾವಣಾ ಸಿಬ್ಬಂದಿ ಶಾಘ್ಲನೆ ವ್ಯಕ್ತಪಡಿಸುವ ಮೂಲಕ ಹುರುಪಿನಿಂದ ಚುನಾವಣಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.